ಕೊಲ್ಲೂರು-ಹಾಲಾಡಿ- ಮಾರಣಕಟ್ಟೆಗೆ ಕೆಎಸ್‌ಆರ್‌ಟಿಸಿ ಬಸ್ ಪುನರಾಂಭ ಯಾವಾಗ..?

ಕೊಲ್ಲೂರು: ಬೇರೆ ಎಲ್ಲಾ ಕಡೆ ಕೆಲವು ಸಮಯಗಳಿಂದ ನಿಲ್ಲಿಸಿದ ಹೆಚ್ಚಿನ ಬಸ್ಸು ಬೇರೆ ರೂಟ್‌ಗಳಿಗೆ ಪ್ರಾರಂಭವಾಗಿದೆ. ಕೊಲ್ಲೂರು- ಹಾಲಾಡಿ ಬಸ್ಸುಗಳು ಮಾತ್ರ ಇನ್ನು ಆರಂಭವಾಗಿಲ್ಲ ಏಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಕೊಲ್ಲೂರು- ಹಾಲಾಡಿ- ಮಾರಣಕಟ್ಟೆಗೆ ಸುಮಾರು ಒಂದು ವರ್ಷಗಳಿಂದ ಬಸ್ ಸ್ಥಗಿತವಾಗಿದ್ದು, ಇದು ಇನ್ನೂ ಆರಂಭವಾಗಿಲ್ಲ. ಈ ಭಾಗದಲ್ಲಿ ಸುಮಾರು ವಿದ್ಯಾರ್ಥೀಗಳು, ಸಾರ್ವಜನಿಕರು ಪ್ರತಿ ನಿತ್ಯ ಪ್ರಯಾಣಿಸುತ್ತಾರೆ. ಸರಕಾರದ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆ ಈ ಮಾರ್ಗದ ಮಹಿಳೆಯರಿಗೆ ಸಿಗುವಂತಾಗಬೇಕು. ಕೊಲ್ಲೂರಿನಿಂದ ವಂಡ್ಸೆ ನೇರಳಕಟ್ಟೆ ಅಂಪಾರು ಶಂಕರನಾರಾಯಣ ಮಾರ್ಗವಾಗಿ ಹಾಲಾಡಿಗೆ ಸಂಚರಿಸುತ್ತಿದ್ದ ಹನುಮಾನ ಕಂಪೆನಿಯ ಬಸ್ಸು,ಮತ್ತು ಲಕ್ಷ್ಮಿ ಎಕ್ಸ್ಪ್ರೆಸ ಬಸ್ಸು ಸ್ಥಗಿತವಾಗಿರುತ್ತದೆ. ಇದರಿಂದ ಮುಖ್ಯವಾಗಿ ಶಂಕರನಾರಾಯಣ ಪದವಿ ಕಾಲೇಜು ಮತ್ತು ಖಾಸಗಿ ಕಾಲೇಜಿಗೆ ಹೋಗುವ 50 ಕ್ಕೂ ವಿದ್ಯಾರ್ಥಿಗಳು ಸೇರಿದಂತೆ ಇದೇ ಮಾರ್ಗವಾಗಿ ಸಂಚರಿಸುವ ನೂರಾರು ಮಂದಿ ಪ್ರತಿ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

ಕೊಲ್ಲೂರಿನಿಂದ ಹಾಲಾಡಿಯಾಗಿ ಹೆಬ್ರಿಗೆ ಬೆಳಿಗ್ಗೆ 7.15 ಕ್ಕೆ ಬಿಡುತ್ತದೆ. ಅದು ಬಿಟ್ಟರೆ 12.30 ಕೊಲ್ಲೂರಿನಿಂದ ಹಾಲಾಡಿ- ಉಡುಪಿ ಮಂಗಳೂರು ಮಾರ್ಗವಾಗಿ ಬರುತ್ತದೆ. ಅಂದರೆ ಬೆಳಿಗ್ಗೆ 7.30 ರಿಂದ ಮದ್ಯಾಹ್ನ ಗಂಟೆ 12.15 ತನಕ ಈ ಮಾರ್ಗದಲ್ಲಿ ಯಾವುದೇ ಬಸ್ಸು ಸಂಚರಿಸುವುದಿಲ್ಲ. ಕೊಲ್ಲೂರಿನಿಂದ ಮಧ್ಯಾಹ್ನ 2.00 ಗಂಟೆಗೆ ಖಾಸಗಿ ಬಸ್ಸು ಹೋದ ಮೇಲೆ ನಂತರ ಯಾವುದೇ ಬಸ್ಸು ಸಂಚರಿಸುದಿಲ್ಲ.ಇಲ್ಲಿ ಕೆಲವು ಗ್ರಾಮಗಳಿಗೆ ಸಬ್ ರಿಜಿಸ್ಟರ್ ಆಫೀಸು ಶಂಕರನಾರಾಯಣ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ.

ಮಧ್ಯಾಹ್ನ ಶಾಲೆ ಮತ್ತು ಕಾಲೇಜು ಬಿಟ್ಟರೆ ಸಂಜೆ ತನಕ ಬಸ್ಸುಗಳಿಗೆ ಕಾಯುತ್ತಾ ಇರಬೇಕು. ಪ್ರಮುಖವಾಗಿ ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೊಲ್ಲೂರಿನಿಂದ ಚಿತ್ತೂರು, ವಂಡ್ಸೆ, ನೆಂಪು, ನೇರಳಕಟ್ಟೆ ವಾಲ್ತೂರು ಅಂಪಾರು ತನಕ ತಮ್ಮ ಸ್ವಂತ ಕೆಲಸಕ್ಕಾಗಿ ಶಂಕರನಾರಾಯಣಕ್ಕೆ ಪ್ರಯಾಣಿಸಲು ಕುಂದಾಪುರ ಮೂಲಕ ಸಂಚರಿಸಬೇಕು. ಹಲವು ವರ್ಷಗಳಿಂದ ಖಾಸಗಿ ಬಸ್ಸು ಒಂದು ಉಡುಪಿ, ಬಾರ್ಕೂರು, ಮಂದಾರ್ತಿ,ಗೋಳಿಯಂಗಡಿ,ಹಾಲಾಡಿ, ಶಂಕರನಾರಾಯಣ, ಬೈಲೂರು ,ಅಂಪಾರು, ವಂಡ್ಸೆ ಕೊಲ್ಲೂರು ಮಾರ್ಗವಾಗಿ ಸಂಚರಿಸುತ್ತಿದೆ. ಈಗ ಈ ಬಸ್ಸು ಕೂಡ ಸ್ಥಗಿತವಾಗಿರುತ್ತದೆ.

ಶಂಕರನಾರಾಯಣ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸು ವ್ಯವಸ್ಥೆ ಇಲ್ಲದಿರುವುದರಿಂದ ಮಧ್ಯಾಹ್ನ ಅನಂತರ ತರಗತಿ ಬೇಗ ಮುಗಿದರೂ ಮಧ್ಯದ ಅವಧಿಯಲ್ಲಿ ಬಸ್ಸು ಇಲ್ಲದೇ ವಿದಾರ್ಥಿಗಳು ಮನೆಗೆ ಹೋಗಲೂ ಕಾಯಬೇಕಾಗಿದೆ. ಇರುವ ಬಸ್ಸುಗಳಲ್ಲಿಯೂ ಭರ್ತಿಆಗಿ ಕೆಲವರು ಮಳೆಗಾಲ ಸಮಯದಲ್ಲಿ ಬ್ಯಾಗು, ಕೊಡೆ ಹಿಡಿದುಕೊಂಡು ಮೆಟ್ಟಿಲುಗಳಲ್ಲಿ ನೇತಾಡಿಕೊಂಡು ಹೋಗಬೇಕಾದ ಅನಿವಾರ್ಯ ಸ್ಥಿತಿ ಇರುತ್ತದೆ.

ಕೆರಾಡಿ, ಚಿತ್ತೂರು, ಇಡೂರು ಮತ್ತು ಇತರ ಗ್ರಾಮಗಳಿಗೆ ಸಬ್ ರಿಜಿಸ್ಟರ್ ಕಛೇರಿ ಶಂಕರನಾರಾಯಣಕ್ಕೆ ಕೆಲಸ ಇದ್ದರೆ ಸ್ವಂತ ವಾಹನ ಇಲ್ಲದವರು ಬಾಡಿಗೆ ವಾಹನ ಅವಲಂಬಿಸಿರ ಬೇಕಾಗುತ್ತದೆ.

ದಯವಿಟ್ಟು ಇದರ ಬಗ್ಗೆ ಸೂಕ್ತ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ವಿದ್ಯಾರ್ಥೀಗಳ ಹಿತದೃಷ್ಟಿಯಿಂದ ಕಾಲೇಜಿಗೆ ಹೋಗಲು ಅನುಕೂಲವಾಗುವಂತೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಪರ್ಮಿಟ್ ಇರುವ ಖಾಸಗಿ ಬಸ್ಸುಗಳು ಸಂಚರಿಸುವಂತೆ ಮಾಡಿ ಹಾಗೂ ಇಲ್ಲಿನ ಅಗತ್ಯತೆಯನ್ನು ಮನಗಂಡು ಸರಕಾರಿ ಬಸ್ಸು ಆದರೂ ಬಿಡುವಂತೆ ಮಾಡಲಿ ಎಂದು ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೊಲ್ಲೂರಿನಿಂದ ಹಾಲಾಡಿ- ಹೆಬ್ರಿ ಮಾರ್ಗವಾಗಿ ಸಂಚರಿಸುವ ಬಸ್ಸುಗಳ ವೇಳಾಪಟ್ಟಿ:-ಬೆಳಿಗ್ಗೆ 7.30 ಕ್ಕೆ (ಕೊಲ್ಲೂರು, ವಂಡ್ಸೆ, ಹಾಲಾಡಿ, ಹೆಬ್ರಿ ,ಅಲ್ಬಾಡಿ, ಹೆಬ್ರಿ, ಮೂಡಬಿದ್ರೆ, ಮಂಗಳೂರು)ಮಧ್ಯಾಹ್ನ 12.10 ಕ್ಕೆ (ಕೊಲ್ಲೂರು, ವಂಡ್ಸೆ, ನೇರಳಕಟ್ಟೆ, ಅಂಪಾರು, ಹಾಲಾಡಿ, ಬ್ರಹ್ಮಾವರ, ಬಾರ್ಕೂರು, ಉಡುಪಿ, ಮಂಗಳೂರು) ಮಧ್ಯಾಹ್ನ 2ಗಂಟೆ (ಕೊಲ್ಲೂರು, ವಂಡ್ಸೆ, ಹಾಲಾಡಿ, ಹೆಬ್ರಿ ,ಅಲ್ಬಾಡಿ, ಹೆಬ್ರಿ, ಮೂಡಬಿದ್ರೆ, ಮಂಗಳೂರು)

ರಕ್ಷಿತ್ ಕುಮಾರ ವಂಡ್ಸೆ,ಸದಸ್ಯರು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಉಡುಪಿ.

Leave a Reply

Your email address will not be published. Required fields are marked *

error: Content is protected !!