ಉಡುಪಿ: ‘ಡಿವೈನ್ ಫಿಟ್‌ನೆಟ್ ಯುನಿಸೆಕ್ಸ್ ಜಿಮ್’ ಉದ್ಘಾಟನೆ
ಉಡುಪಿ, ಜು.17: ನಗರದ ಮಸೀದಿ ರಸ್ತೆಯ ಶಂಕರ್ ಬಿಲ್ಡಿಂಗ್‌ನ 3ನೇ ಅಂತಸ್ತಿನಲ್ಲಿ ನೂತನವಾಗಿ ‘ಡಿವೈನ್ ಫಿಟ್‌ನೆಟ್ ಯುನಿಸೆಕ್ಸ್ ಜಿಮ್’ ಅನ್ನು ಫೆರ್ನಾಂಡಿಸ್ ಗ್ರೂಪ್ ಆಫ್ ಕಂಪೆನಿಯ ಪ್ರವರ್ತಕ ವಿಲ್ಸನ್ ಫೆರ್ನಾಂಡಿಸ್ ಅವರ ಪತ್ನಿ ಲೀನಾ ಫೆರ್ನಾಂಡಿಸ್ ಅವರು ಭಾನುವಾರ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು.
ಉಡುಪಿ ಮದರ್ ಆಫ್ ಸಾರೋಸ್ ಚರ್ಚ್‌ನ ಸಹಾಯಕ ಧರ್ಮಗುರು ರೆ|ಫಾ| ವಿಜಯ್ ಜೋಯ್ಸನ್ ಡಿ’ಸೋಜಾ ಮಾತನಾಡಿ, ಕೋವಿಡ್ ಬಳಿಕ ಆರೋಗ್ಯವೇ ಭಾಗ್ಯ ಎಂಬುದನ್ನು ಮನಗಂಡ ಜನತೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಜೀವನದಲ್ಲಿ ಏನನ್ನೂ ಸಾಧಿಸಬಹುದು ಎಂದು ಆಶೀರ್ವಚನ ನೀಡಿದರು.
ದೀಪ ಬೆಳಗಿಸಿದ ನಿವೃತ್ತ ಡಿವೈಎಸ್‌ಪಿ ವೆಲೆಂಟೈನ್ ಡಿ’ಸೋಜಾ ಮಾತನಾಡಿ, ವ್ಯಾಯಾಮಕ್ಕೆ ವಯೋಮಿತಿ ಇಲ್ಲದ ನೆಲೆಯಲ್ಲಿ ಶಾರೀರಿಕ ಆರೋಗ್ಯ ವೃದ್ಧಿಗೆ ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಬಿಜೆಪಿ ಮುಖಂಡ ಕೆ.ಪಿ.ಜಗದೀಶ ಅಧಿಕಾರಿ ಶುಭಹಾರೈಸಿದರು.
ಮಾಜಿ ಶಾಸಕ ಕೆ. ರಘುಪತಿ ಭಟ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪ್ರವರ್ತಕ ವಿಲ್ಸನ್ ಫೆರ್ನಾಂಡಿಸ್ ಸ್ವಾಗತಿಸಿ ಪ್ರಸ್ತಾವಿಸಿದರು. ಸ್ಟೀವನ್ ಕುಲಾಸೋ ನಿರೂಪಿಸಿದರು. ಐಡಾ ಫೆರ್ನಾಂಡಿಸ್ ವಂದಿಸಿದರು.