ಕಿನ್ನಿಗೋಳಿ: ಮೆಡಲ್ ವೀರ ‘ಲಕ್ಕಿ’ ನೆನಪು ಮಾತ್ರ

Oplus_131072

ಕಿನ್ನಿಗೋಳಿ: ಕಂಬಳ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ ‘ ಲಕ್ಕಿ’ ಎಂಬ ಕೋಣ ಬುಧವಾರ ಕೊನೆಯುಸಿರೆಳೆದಿದೆ.

ಕಳೆದ ಕಂಬಳ ಸೀಸನ್ ನಲ್ಲಿ 5 ಮೆಡಲ್ ಗೆಳನ್ನು ಲಕ್ಕಿ ಗೆದ್ದುಕೊಂಡಿದ್ದ. ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಲಕ್ಕಿ 2ನೇ ಬಹುಮಾನ ಪಡೆದಿದ್ದರೆ, ಕಕ್ಯಪದವು, ಬೆಂಗಳೂರು,ನರಿಂಗಾನ, ಐಕಳ ಮತ್ತು ಜಪ್ಪು ಕಂಬಳಗಳಲ್ಲಿ ಮೆಡಲ್ ಗೆದ್ದಿದ್ದ.

ವರಪಾಡಿ ಬಡಗುಮನೆ ದಿವಾಕರ ಚೌಟ  ಅವರು ಸಾಕಿದ್ದ ಕೋಣ ನಿಧನ ಹೊಂದಿರುವುದು ಹಲವು ಕಂಬಳ ಅಭಿಮಾನಿಗಳಿಗೆ ತೀವ್ರ ದುಃಖ ತಂದಿದೆ. ಹಲವು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದರು.

Leave a Reply

Your email address will not be published. Required fields are marked *

error: Content is protected !!