ಬ್ರಹ್ಮಾವರ: ಪ್ರತ್ಯೇಕ ಪ್ರಕರಣ- ಇಬ್ಬರು ನಾಪತ್ತೆ

ಬ್ರಹ್ಮಾವರ, ಜು.17: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಹನೇಹಳ್ಳಿ ಗ್ರಾಮದ ಫೆಡ್ರಿಕ್ ಡಿಸೋಜ (53) ಎಂಬವರು ಜೂ.27ರಂದು ಉಡುಪಿಯಲ್ಲಿ ಹೊಟೇಲ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ಮನೆಗೆ ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ಬೈಕಾಡಿ ಗ್ರಾಮದ ಬೊಬ್ಬರ್ಯ ಜಡ್ಡು ನಿವಾಸಿ ಸುರೇಂದ್ರ ಎಂಬವರ ಪತ್ನಿ ರೂಪಾ(57) ಎಂಬವರು ಜು.15ರಂದು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!