ಮಣಿಪಾಲ: ಫ್ಲ್ಯಾಟ್‌ನಲ್ಲಿ ಸಿಲುಕಿಕೊಂಡ ಯುವತಿಯ ರಕ್ಷಣೆ

ಉಡುಪಿ: ಫ್ಲ್ಯಾಟ್ ವೊಂದರಲ್ಲಿ ಡೋರ್ ಲಾಕ್ ಆಗಿ ಮನೆಯೊಳಗಡೆ ಸಿಲುಕಿಕೊಂಡ ಯುವತಿಯನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉಡುಪಿಯ‌ ಮಣಿಪಾಲದಲ್ಲಿ ನಡೆದಿದೆ.

ರಕ್ಷಿಸಲ್ಪಟ್ಟ ಯುವತಿಯನ್ನು 25 ವರ್ಷದ ಕೃತಿ ಗೋಯಲ್ ಎಂದು ಗುರುತಿಸಲಾಗಿದೆ. ಈಕೆ ಮಣಿಪಾಲದ ಫ್ಲಾಟ್ ಒಂದರ 4ನೇ ಮಹಡಿಯಲ್ಲಿ ಡೋರ್ ಒಳಗಡೆ ಲಾಕ್ ಆಗಿ ಹೊರಬರದೆ ಸಿಲುಕಿಕೊಂಡಿದ್ದಳು. ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉಡುಪಿ ಜಿಲ್ಲಾ ಅಗ್ನಿ ಶಾಮಕದಳವು ಮನೆಯೊಳಗೆ ಸಿಲುಕಿದ್ದ ಯುವತಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಅಗ್ನಿಶಾಮಕದ ದಳದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!