ಮಣಿಪಾಲ: ಟೆಸ್ಟ್ ರೈಡ್‌ಗೆ ಬೈಕ್ ಪಡೆದು ಎಸ್ಕೇಪ್
ಮಣಿಪಾಲ: ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಮಾರಾಟ ಕೇಂದ್ರದಲ್ಲಿ ಬೈಕ್ ಖರೀದಿಗೆ ಬಂದಿದ್ದ ವಂಚಕನೊಬ್ಬ ಟೆಸ್ಟ್ ರೈಡ್‌ಗೆ ಬೈಕ್ ಪಡೆದು ಪರಾರಿಯಾಗಿದ್ದಾನೆ.
ಪ್ರಶಾಂತ್ ಕುಮಾರ್ ಎಂಬುವರು ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ‘ನ್ಯೂ ಮಣಿಪಾಲ್ ಬಜಾರ್’ ಎಂಬ ಹಳೆಯ ದ್ವಿಚಕ್ರ ವಾಹನಗಳ ಮಾರಾಟ ಕೇಂದ್ರ ನಡೆಸುತ್ತಿದ್ದು, ಅ.31ರಂದು ಗಣೇಶ್ ಉದ್ಯಾವರ ಹೆಸರಿನ ವ್ಯಕ್ತಿ ಬೈಕ್ ಖರೀದಿಸಲು ಬಂದಿದ್ದರು. ಬೈಕ್ ಓಡಿಸಿ ಖರೀದಿ ಮಾಡುವುದಾಗಿ ನಂಬಿಸಿ, ವಾಹನ ಪಡೆದು ಹೋದವರು ಮರಳಿ ಬಂದಿಲ್ಲ ಎಂದು ಪ್ರಶಾಂತ್ ಉದ್ಯಾವರ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಪತ್ತೆಗೆ ಜಾಲ ಬೀಸಿದ್ದಾರೆ.