ಮಲ್ಪೆ: ಬಸ್ಸಿಗೆ ಸ್ಕೂಟಿ ಡಿಕ್ಕಿ- ಗುಂಡಿಬೈಲಿನ ನಿವಾಸಿ ಗಂಭೀರ

Oplus_131072

ಉಡುಪಿ: ಬಸ್ಸಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಲ್ಪೆ ಸಿಟಿಜನ್ ಸರ್ಕಲ್ ಸಮೀಪದ ನೆರ್ಗಿ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಗಾಯಾಳುವನ್ನು ಉಡುಪಿ ಗುಂಡಿಬೈಲಿನ ಲಕ್ಷಣ (60) ಎಂದು ಗುರುತಿಸಲಾಗಿದ್ದು, ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ತಮ್ಮ ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡಿರುವ ಈ ವ್ಯಕ್ತಿಯ ಮಗನ ಹೆಸರು ಸಚಿನ್ ಹಾಗೂ ಪತ್ನಿಯ ಹೆಸರು ರತ್ನ ಎನ್ನಲಾಗಿದೆ. ಗುಂಡಿಬೈಲು ವಿನಲ್ಲಿ ಅವರಿಗೆ ಕಾರ್ತಿಕ್ ವೆಲ್ಡಿಂಗ್ ವರ್ಕ್ ಶಾಪ್ ಇದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!