ಡೆಂಗ್ಯೂ, ಮಲೇರಿಯಾ ಸೊಳ್ಳೆ ಬಂದಿದೆ ಎಚ್ಚರ…!
ಉಡುಪಿ: ಆಭರಣ ಜ್ಯುವೆಲ್ಲರ್ಸ್ ಉಡುಪಿ ಇವರ ಸಹಯೋಗದೊಂದಿಗೆ ಸಮುದಾಯ ವೈದ್ಯಕೀಯ ವಿಭಾಗ ಕೆ ಎಂ ಸಿ ಮಣಿಪಾಲ ಹಾಗೂ ಮಣಿಪಾಲ್ ಸ್ಯಾಂಡ್ ಹಾರ್ಟ್ ನ ಕಲಾವಿದರಾದ ಶ್ರೀನಾಥ್ ಮಣಿಪಾಲ, ರವಿ ಹಿರೆಬೆಟ್ಟು, ಪುರಂದರ್ ಮಲ್ಪೆ ಇವರು ಕಾಪು ಕಡಲಕಿನಾರೆಯಲ್ಲಿ, ಡೆಂಗ್ಯೂ , ಮಲೇರಿಯಾ ಜಾಗೃತಿ ಮೂಡಿಸುವಂತಹ ಮರಳು ಶಿಲ್ಪವನ್ನು ರಚಿಸಿ ಜನರ ಮನಸ್ಸಿನಲ್ಲಿ ಅಚ್ಚಳಿಯುವಂತಹ ಕಲಾಕೃತಿಯನ್ನುರಚಿಸಿದರು.
ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ ಯಾವುದೇ ರೀತಿಯಲ್ಲಿ ನೀರು ನಿಲ್ಲಲು ಆಸ್ಪದ ಕೊಡುವಂತಹ ಸೊಳ್ಳೆ ಉತ್ಪತ್ತಿಯ ತಾಣವನ್ನು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. ಡೆಂಗ್ಯೂ ಹರಡುವಂತಹ ಈಡೀಸ್ ಸೊಳ್ಳೆಯು ಸುಮಾರು 500 ಮಿ. ವ್ಯಾಪ್ತಿಯಷ್ಟೆ ಹಾರಬಲ್ಲದು, ಪ್ರತಿ 5 ದಿನಕ್ಕಾದರೂ ನಿಂತ ನೀರನ್ನು ತೆಗೆದು ಸ್ವಚ್ಚಗೊಳಿಸಿ ಲಾರ್ವಗಳು ಉತ್ಪತ್ತಿಯಾಗದಂತೆ ತಡೆಯಿರಿ ಎಂದು ಸಮುದಾಯ ವೈದ್ಯಕೀಯ ವಿಭಾಗ ಕೆ ಎಂ ಸಿ ಯ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಜನರಲ್ಲಿ ಮನವಿ ಮಾಡಿದ್ದಾರೆ.