ಉಡುಪಿ: ಎಸಿ ಬ್ಲಾಸ್ಟ್ ಆಗಿ ಬಾರ್ ಮಾಲಕ ರಮಾನಂದ ಶೆಟ್ಟಿ ಮೃತ್ಯು- ಪತ್ನಿ ಗಂಭೀರ

Oplus_131072

ಉಡುಪಿ: ಜು.15(ಉಡುಪಿ ಟೈಮ್ಸ್ ವರದಿ): ನಗರದ ಬಾರ್‌ವೊಂದರ ಮಾಲೀಕರ ಮನೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಬಾರ್ ಮಾಲೀಕ ಮೃತಪಟ್ಟಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯ ಬೆಡ್‌ರೂಮ್‌ನ ಎಸಿ ಬ್ಲಾಸ್ಟ್ ಆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕ ರಮಾನಂದ ಶೆಟ್ಟಿ(52) ಅವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಮಾನಂದ ಅವರ ಪತ್ನಿ ಅಶ್ವಿನಿ ಅವರೂ ಗಂಭೀರವಾಗಿ ಗಾಯಗೊಂಡಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ಅಗ್ನಿ ಅವಘಡದಲ್ಲಿ ಮನೆಯು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಯ ಮಹಡಿಯಲ್ಲಿದ್ದ ಮಕ್ಕಳಿಬ್ಬರು ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!