ಉಡುಪಿ: ಮನೆಯಲ್ಲಿ ಭಾರೀ ಅಗ್ನಿ ಅವಘಡ- ಬಾರ್ ಮಾಲೀಕ ದಂಪತಿ ಗಂಭೀರ

Oplus_131072

ಉಡುಪಿ: ಜು.15(ಉಡುಪಿ ಟೈಮ್ಸ್ ವರದಿ): ನಗರದ ಬಾರ್‌ವೊಂದರ ಮಾಲೀಕರ ಮನೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಬಾರ್ ಮಾಲೀಕ ಮತ್ತು ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ನಗರದ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆ ಸಿಲುಕಿದ ಬಾರ್ ಮಾಲೀಕ ರಮಾನಂದ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಅವರ ಪತ್ನಿ ಅಶ್ವಿನಿ ಅವರಿಗೂ ಗಂಭೀರ ಗಾಯವಾಗಿದೆಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ. ಮನೆಯೊಳಗೆ ಮಕ್ಕಳಿಬ್ಬರು ಸಿಲುಕಿಕೊಂಡಿದ್ದು ಅವರ ರಕ್ಣಣಾ ಕಾರ್ಯಚರಣೆ ಮುಂದುವರಿದಿದೆ.

ಬೆಂಕಿ ಅವಘಡಕ್ಕೆ ಕಾರಣ ನಿಗೂಢ: ಅಗ್ನಿ ಅವಘಡದಿಂದ ಮನೆಯು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಈ ದುರ್ಘಟನೆಗೆ ಕಾರಣ ಮಾತ್ರ ತಿಳಿದು ಬಂದಿಲ್ಲ, ಪೊಲೀಸರ ಪ್ರಕರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಮನೆಯ ಫಿಡ್ಜ್ ಬ್ಲಾಸ್ಟ್ ಆಗಿರುವ ಸಾಧ್ಯತೆ ಇರಬಹುದು ಎಂದು ಅಂದಾಜಿಸಲಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ….

Leave a Reply

Your email address will not be published. Required fields are marked *

error: Content is protected !!