ಕಜ್ಕೆ: ಜು.21- ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ 42ನೇ ಚಾತುರ್ಮಾಸ್ಯ
ಕಜ್ಕೆ : ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅವರ ಶ್ರೀ ಕ್ರೋಧಿ ನಾಮ ಸಂವತ್ಸರದ 42ನೇ ಚಾತುರ್ಮಾಸ್ಯ ವೃತಾನುಷ್ಠಾನ ಕಾರ್ಯಕ್ರಮವು ಇದೇ ಜುಲೈ 21ರಿಂದ ಸೆಷ್ಟಂಬರ್ 18ರ ವರೆಗೆ ಬ್ರಹ್ಮಾವರ ತಾಲ್ಲೂಕಿನ ನಾಲ್ಕೂರು ಗ್ರಾಮ ಕಜ್ಕೆ ಶಾಖಾ ಮಠ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ. ಜುಲೈ 20ರಂದು ಶನಿವಾರ 9 ಗಂಟೆಗೆ ಗೋಳಿಯಂಗಡಿ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘದಿಂದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ಪುರಪ್ರವೇಶ ಮತ್ತು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಗೋಳಿಯಂಗಡಿ ಶ್ರೀಧರ ಆಚಾರ್ಯ ಮೆರವಣಿಗೆ ಉದ್ಘಾಟಿಸುವರು. ಬಳಿಕ ಕಜ್ಕೆ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವೃತಾನುಷ್ಠಾನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಶ್ರೀಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರು ದಿವ್ಯಸಾನಿಧ್ಯವಹಿಸುವರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಉದ್ಘಾಟಿಸುವರು. ವೇಲಾಪುರಿ ವಿಶ್ವನಾಥ ಶರ್ಮ ಧಾರ್ಮಿಕ ಉಪನ್ಯಾಸ ನೀಡುವರು. ಉಡುಪಿ ಶಾಸಕ ಯಶಪಾಲ್ ಸುವರ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಗೌರವಾಧ್ಯಕ್ಷ ಯುಕೆಎಸ್ ಸೀತಾರಾಮ ಆಚಾರ್ಯ, ಮೂಡಬಿದರೆ ಎಸ್‌ಕೆಎಫ್ ಎಲಿಕ್ಸರ್ ಉದ್ಯಮ ಸಮೂಹದ ಆಡಳಿತ ನಿರ್ದೇಶಕ ಡಾ.ಜಿ.ರಾಮಕೃಷ್ಣ ಆಚಾರ್, ವಸಂತ ಮುರುಳಿ ಆಚಾರ್ ಬೆಂಗಳೂರು, ಮುದ್ರಾಡಿ ಮಂಜುನಾಥ ಆಚಾರ್ಯ ಮಂಗಳೂರು, ವಿಠ್ಠಲ ಬೆಳಂದೂರು, ಪ್ರತಾಪ ಹೆಗ್ಡೆ ಮಾರಾಳಿ, ಮೈರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ, ನೇರಂಬಳ್ಳಿ ರಮೇಶ ಆಚಾರ್ಯ ಸಹಿತ ಗಣ್ಯರು, ಸ್ಥಳದಾನಿಗಳು, ರಾಜ್ಯದ ವಿವಿದೆಡೆಯ ವಿಶ್ವಕರ್ಮ ಸಮಾಜದ ವಿವಿಧ ಗಣ್ಯರು, ಮುಖಂಡರು, ಎಜೆಎಸ್ ಪಿ ಟ್ರಸ್ಟ್ ಪದಾಧಿಕಾರಿಗಳು, ಸಮಿತಿಯ ಪ್ರಮುಖರು, ಮಾರ್ಗದರ್ಶಕರು, ಸದಸ್ಯರು ಭಾಗವಹಿಸುವರು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.