ಶಿರ್ವ: ಅಲೆಕ್ಸ್ ಟೆಕ್ಸ್ ಟೈಲ್ ಸ್ಥಾಪಕರ ಪತ್ನಿ ನಿಧನ

Oplus_131072

ಶಿರ್ವ (ಉಡುಪಿ ಟೈಮ್ಸ್ ವರದಿ): ಕರಾವಳಿ ಕರ್ನಾಟಕದ ಪ್ರಖ್ಯಾತ ವಸ್ತ್ರ ಮಳಿಗೆಯಲ್ಲಿ ಒಂದಾಗಿರುವ ಉಡುಪಿ ಜಿಲ್ಲೆಯ ಶಿರ್ವದ ಅಲೆಕ್ಸ್ ಟೆಕ್ಸ್ ಟೈಲ್ ಇದರ ಸ್ಥಾಪಕ ದಿ. ಅಲೆಕ್ಸ್ ಡಿಸೋಜಾ ರವರ ಪತ್ನಿ ಬೆನೆಡಿಕ್ಟ ಡಿಸೋಜಾ ಹೃದಯಾಘಾತದಿಂದ ಇಂದು (ಜುಲೈ 13) ನಿಧನ ಹೊಂದಿದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

60ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಅಲೆಕ್ಸ್ ಟೆಕ್ಸ್ಟ್ ಟೈಲ್ ಶಿರ್ವ ಪೇಟೆಯಲ್ಲಿ ಕಾರ್ಯಚರಿಸುತ್ತಿದ್ದು, ಗುಣಮಟ್ಟದ ವಸ್ತ್ರಗಳಿಗೆ ಹೆಸರುವಾಸಿಯಾಗಿದೆ. ಕಳೆದ ಹಲವು ವರ್ಷಗಳಿಂದ ಶಿರ್ವ ಇಲ್ಲಿಯ ಹಳೆ ಚರ್ಚಿನ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದ ಮೃತರು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಅಲೆಕ್ಸ್ ಟೆಕ್ಸ್ ಟೈಲ್ಸ್ ಇದರ ಪ್ರಸ್ತುತ ಮಾಲಕರಾಗಿರುವ ಆಲ್ವಿನ್ ಡಿಸೋಜಾ, ದಕ್ಷಿಣ ಭಾರತದ ಪ್ರಖ್ಯಾತ ಫೋಟೋಗ್ರಾಫರ್ ಕ್ರಿಸ್ಟಲ್ ಸ್ಟುಡಿಯೋ ಇದರ ಮಾಲಕ ಅರುಲ್ ಡಿಸೋಜಾ ಸಹಿತ ಮೂವರು ಪುತ್ರರು, ಮೂವರು ಪುತ್ರಿಯಂದಿರು ಸಹಿತ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಜುಲೈ 16 ಮಂಗಳವಾರ ಸಂಜೆ 03:30ಕ್ಕೆ ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!