ಉಡುಪಿ: ಲಯನ್ಸ್ ನಿಂದ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿ ವಿತರಣೆ
ಉಡುಪಿ: ಕೆಲವು ದಿನಗಳ ಹಿಂದೆ ಬಂದ ನೆರೆಯಿಂದ ಪೀಡಿತರಾದ ಕಡೆಕಾರು ಕೊಳ ಪರಿಸರದ ನಿವಾಸಿಗಳಿಗೆ ಲಯನ್ಸ್ ಜಿಲ್ಲೆ 317ಸಿ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್, ಬಟ್ಟೆ ಬರೆಗಳ ವಿತರಣೆ ಕಾರ್ಯಕ್ರಮ ಕೊಳ ಫ್ರೆಂಡ್ಸ್ ವಠಾರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲಯನ್ಸ್ ಜಿಲ್ಲಾ ಗವರ್ನರ್ ಎನ್. ಎಮ್. ಹೆಗಡೆ ಕಿಟ್ ಗಳನ್ನು ವಿತರಿಸಿ ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ಬಂದ ಮಳೆಯಿಂದ ಉಡುಪಿ ಭಾಗದಲ್ಲಿ ಸಾಕಷ್ಟು ಹಾನಿಯಾಗಿದ್ದು ಲಯನ್ಸ್ ಸಂಸ್ಥೆಯಿಂದ ಪ್ರವಾಹ ಪೀಡಿತರಿಗೆ ಸ್ಪಂದಿಸುವ ಕೆಲಸ ನಡೆಯಿತ್ತಿದೆ. ಇದರ ಅಂಗವಾಗಿ ಇವತ್ತು ಕಿಟ್ ಗಳನ್ನು ನೀಡುತ್ತಿದ್ದೇವೆ ಎಂದರು.
ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲಿಯಾನ್, ಕೊಳ ಫ್ರೆಂಡ್ಸ್ ನ ಗೌರವಧ್ಯಕ್ಷರಾದ ವಿಜಯ ಡಿ. ಸುವರ್ಣ, ಶಂಕರ ಸುವರ್ಣ, ಗೋಪಾಲ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಜತಿನ್ ಕಡೆಕಾರ್, ಕಿರಣ್ ರಂಗಯ್ಯ, ಆನಂದ್, ಮಧುಕರ್ ಮತ್ತು ಕೊಳ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು. ಕೊಳ ಫ್ರೆಂಡ್ಸ್ ಅಧ್ಯಕ್ಷ ರಾಜು ಸುವರ್ಣ ಸ್ವಾಗತಿಸಿದರು, ಚೇತನ್ ಸುವರ್ಣ ವಂದಿಸಿದರು.