ಸಂತೆಕಟ್ಟೆ ಕಾಮಗಾರಿ ವಿಳಂಬವಾದರೆ ಅಧಿಕಾರಿಗಳ ವಿರುದ್ಧ ದೂರು: ಸಂಸದ ಕೋಟ

Oplus_0

ಉಡುಪಿ: ಸಂತೆಕಟ್ಟೆ ಅಂಡರ್ಪಾಸ್ ಕಾಮಗಾರಿ ಸ್ಥಳಕ್ಕೆ ತಾನು ಮೂರು ಬಾರಿ ಭೇಟಿ ನೀಡಿದ್ದು, ಕಾಮಗಾರಿಯನ್ನು ಶೀಘ್ರ ಪೂರ್ಣ ಗೊಳಿಸುವಂತೆ ಸೂಚನೆ ನೀಡಲಾಗಿದೆ. ಇನ್ನೂ ವಿಳಂಬ ಕಂಡುಬಂದರೆ ಹೆದ್ದಾರಿ ಅಧಿಕಾರಿಗಳು ಹಾಗೂ ಗುತ್ತಿಗೆ ದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಾರಿಗೆ ಸಚಿವರಿಗೆ ದೂರು ನೀಡುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಉಡುಪಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಚರ್ಚಿಸಿ ಕಾಮಗಾರಿಯನ್ನು ತ್ವರಿತಗೊಳಿಸಲು ಮನವಿ ಮಾಡಿದ್ದು, ಅವರು ಸಕಾರಾತ್ಮ ವಾಗಿ ಸ್ಪಂಧಿಸಿದ್ದರು. ಇಷ್ಟಾದ ನಂತರವೂ ಎನ್‌ಎಚ್ ಅಧಿಕಾರಿಗಳು ಕಾಮಗಾರಿ ವಿಳಂಬ ಮಾಡುತ್ತಿದ್ದರೆ ಈ ಅಧಿಕಾರಿಗಳ ವಿರುದ್ಧ ಎನ್‌ಎಚ್ ಇಲಾಖೆಗೆ ಲಿಖಿತ ದೂರು ನೀಡುತ್ತೇನೆ ಎಂದು ಅವರು ಎಚ್ಚರಿಸಿದರು.

ಇಂದ್ರಾಳಿ ರೈಲ್ವೆ ಸೇತುವೆ ನಿರ್ಮಾಣ ಪ್ರಕ್ರಿಯೆಯಲ್ಲಿ ಮೆಸ್ಕಾಂ ಕಂಬಗಳನ್ನು ಸ್ಥಳಾಂತರಿಸದ ಕಾರಣ ಕೆಲವು ಸಮಸ್ಯೆ ಗಳಿವೆ. ನಿನ್ನೆ ಅವರು ತಮ್ಮ ಕೆಲಸವನ್ನು ಪೂರ್ಣಗೊಳಿಸಿದರು. ಮಳೆ ನಿಲ್ಲುತ್ತದೆ ಎಂದು ಅಧಿಕಾರಿಗಳು ಕಾಯುತ್ತಿದ್ದಾರೆ, ಮಳೆ ನಿಂತರೆ ಕಾಮಗಾರಿ ಆರಂಭವಾಗಲಿದೆ ಎಂದರು.

ಕೊಂಕಣ ರೈಲ್ವೆ ಅಭಿವೃದ್ಧಿ ಕುರಿತು ಮಾತನಾಡಿದ ಕೋಟ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಕುರಿತು ಚರ್ಚೆ ನಡೆಯುತ್ತಿದೆ. ಜುಲೈ 22ರಂದು ಕರಾವಳಿ ಸಂಸದರು ಕೇಂದ್ರ ರೈಲ್ವೇ ಸಚಿವರನ್ನು ಭೇಟಿ ಮಾಡಲಿದ್ದು, ಸಭೆಯಲ್ಲಿ ಅವರೊಂದಿಗೆ ಚರ್ಚಿಸುತ್ತೇವೆ. ವಂದೇ ಭಾರತ್ ಸೇವೆಯನ್ನು ಮುಂಬೈವರೆಗೆ ವಿಸ್ತರಿಸಲು ಮನವಿ ಮಾಡಲಾ ಗುವುದು. ಗಳಿವೆ. ರೈಲ್ವೇ ರಾಜ್ಯ ಸಚಿವ ವಿ ಸೋಮಣ್ಣ ಜುಲೈ 17 ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದರು.

ಅಂಬಲಪಾಡಿ ಅಂಡರ್ಪಾಸ್ ಕಾಮಗಾರಿಗೆ ಟೆಂಡರ್ ಅಂಗೀಕಾರವಾಗಿದೆ. ಆದರೆ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದೆ. ಕಟಪಾಡಿ ಅಂಡರ್ಪಾಸ್‌ನ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದರು.

ಅದನ್ನು ಸಹ ಫಾಲೋಅಪ್ ಮಾಡಿ ಶೀಘ್ರವೇ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಲಾಗುವುದು. ರಾಷ್ಟ್ರೀಯ ಹೆದ್ದಾರಿಗಳ ಹಲವು ಕಡೆ ಸರ್ವಿಸ್ ರಸ್ತೆ ಆಗಬೇಕಾಗಿದೆ. ಇದನ್ನೂ ಸಂಬಂಧಿತರೊಂದಿಗೆ ಚರ್ಚಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ನುಡಿದರು.

Leave a Reply

Your email address will not be published. Required fields are marked *

error: Content is protected !!