ಕನ್ನಡದ ಖ್ಯಾತ ನಿರೂಪಕಿ ಹಾಗೂ ಚಲನಚಿತ್ರ ನಟಿ ಅಪರ್ಣಾ ಇನ್ನಿಲ್ಲ
ಬೆಂಗಳೂರು: ಕನ್ನಡವನ್ನು ಅಂದವಾಗಿ ಕೂಡಿಸಿ ಮಾತುಗಳ ಮೂಲಕ ಜನರ ಮನವನ್ನಾಗಿತ್ತಿರುವಂತಹ ಕನ್ನಡದ ಖ್ಯಾತ ನಿರೂಪಕಿ ಹಾಗೂ ಚಲನಚಿತ್ರ ನಟಿ ಅಪರ್ಣಾ ತನ್ನ 52 ರ ಹರೆಯದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಸುಮಾರು ಎರಡು ವರ್ಷದಿಂದ ಕಾಡುತ್ತಿದ್ದ ಕ್ಯಾನ್ಸರ್ ಮಹಾಮಾರಿಗೆ ಅಪರ್ಣಾ ಜುಲೈ 11 ರಂದು ಬಲಿಯಾಗಿದ್ದಾರೆ.
ಅಚ್ಚಗನ್ನಡವನ್ನು ಸ್ವಚ್ಛವಾಗಿ ಮಾತನಾಡುವವರು ಎಂದೇ ಹೆಸರು ಮಾಡಿರುವ ಅಪರ್ಣಾ. ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆಯಾಗಿ ಮನೆಮಾತದವರು. ಮಜಾ ಟಾಕೀಸ್ ನ ವರಲಕ್ಷ್ಮಿಯಾಗಿ ಮುಕ್ತ ಧಾರವಾಹಿಯ ಶೀಲಾ ಪ್ರಸಾದ ರಾಗಿ ನಟನೆಯಲ್ಲೂ ವೀಕ್ಷಕರ ಮನ ಮುಟ್ಟಿದವರು. ಎಣಿಸಲಾರದಷ್ಟು ಕಾರ್ಯಕ್ರಮಗಳ ನಿರೂಪಣೆಯನ್ನು ನೆರವೇರಿಸಿದ ಅಪರ್ಣ ಚಲನಚಿತ್ರದಲ್ಲಿಯೂ ನಟಿಸಿದ್ದರು.
ಅಪರ್ಣಾ ರ ಪೂರ್ಣ ಹೆಸರು ಅಪರ್ಣ ವಸ್ತಾರೆ. ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದಿಂದ ಬೆಳಕಿಗೆ ಬಂದ ಕನ್ನಡತಿ ಇವರು.
ತನ್ನ ಎಳವೆಯ ದಿವಸಗಳಿಂದ ದೂರದರ್ಶನ ಆಕಾಶವಾಣಿಯಲ್ಲಿ ತನ್ನ ಮಾತಿನ ಮೂಲಕ, ಶೋತ್ರಗಳ ಹೃದಯದ ಕದತಟ್ಟಿದವರು. ತನ್ನ ಸ್ವಚ್ಛವಾದ ಸುಂದರವಾದ ಕನ್ನಡದ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಿರೂಪಿಸಿ ಕನ್ನಡ ಜನರ ಪ್ರೀತಿ ಸಂಪಾದಿಸಿದ್ದರು. ಇವರ ಅಗಲಿಕೆ ಕೇವಲ ಚಿತ್ರರಂಗ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ತುಂಬಾಲಾರದ ನಷ್ಟ ಉಂಟಾಗಿದೆ.
Very sad.
May her soul rest in peace.