ಉಡುಪಿ: ಬಸ್ಸುಗಳು ಪರವಾನಿಗೆಯಲ್ಲಿ ನಿಗಧಿಪಡಿಸಿದ ಮಾರ್ಗದಲ್ಲಿ ಸಂಚರಿಸಲು ಸೂಚನೆ
ಉಡುಪಿ, ಜು.11: ಸಂತೆಕಟ್ಟೆಯಿAದ ಉಡುಪಿಗೆ ಬರುವ ಸಿಟಿ ಬಸ್ಸುಗಳ ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು-ಎನ್.ಎಚ್ 17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು-ಕರಾವಳಿ ಬೈಪಾಸ್-ಅಂಬಲಪಾಡಿ ಬೈಪಾಸ್- ಬ್ರಹ್ಮಗಿರಿ-ಅಜ್ಜರಕಾಡು-ಹಳೇ ತಾಲೂಕು ಕಚೇರಿ ಮೂಲಕ ಸಿಟಿ ಬಸ್ಸು ನಿಲ್ದಾಣ ತಲುಪಲು, ಸಂತೆಕಟ್ಟೆಯಿ0ದ ಉಡುಪಿಗೆ ಬರುವ ಉಳಿದ ಸಿಟಿ ಬಸ್ಸುಗಳು ಅಂಬಾಗಿಲು-ತಾ0ಗದಗಡಿ-ಗು0ಡಿಬೈಲು- ಕಲ್ಸಂಕ ಮಾರ್ಗವಾಗಿ ಸಂಚರಿಸಿ ಸಿಟಿ ಬಸ್ಸು ನಿಲ್ದಾಣ ತಲುಪಲು ಮತ್ತು ಬಾರ್ಕೂರು ಬ್ರಹ್ಮಾವರ- ಹೊನ್ನಾಳ-ಹೆಬ್ರಿ-ಪೆರ್ಡೂರು-ಕುಕ್ಕೆಹಳ್ಳಿ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು ಅಂಬಾಗಿಲು ಗುಂಡಿಬೈಲು ಮೂಲಕ ಕಲ್ಸಂಕ ಬಂದು ಉಡುಪಿ ಬಸ್ ನಿಲ್ದಾಣ ತಲುಪುವಂತೆ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಆದರೆ ಈಗಾಗಲೇ ಹಲವು ಬಾರಿ ಈ ಕುರಿತು ನೋಟೀಸ್ ನೀಡಿ ಪ್ರಕರಣ ದಾಖಲಿಸಿದ್ದರೂ ಕೂಡ ಅಂಬಾಗಿಲು-ಕಲ್ಸ0ಕ ಮಾರ್ಗದಲ್ಲಿ ಬಸ್ಸುಗಳು ಸಂಚರಿಸದಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಇದು ಅಂತಿಮ ಸೂಚನೆ ಎಂದು ಪರಿಗಣಿಸಿ ಸಂತೆಕಟ್ಟೆಯಿ0ದ ಉಡುಪಿಗೆ ಬರುವ ಸಿಟಿ ಬಸ್ಸುಗಳ ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು-ಎನ್.ಎಚ್ 17 ಎಂದು ನಮೂದಿಸದೇ ಇರುವ ಸಿಟಿ ಬಸ್ಸುಗಳು ಮತ್ತು ಬಾರ್ಕೂರು ಬ್ರಹ್ಮಾವರ-ಹೊನ್ನಾಳ-ಹೆಬ್ರಿ- ಪೆರ್ಡೂರು-ಕುಕ್ಕೆಹಳ್ಳಿ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು ಅಂಬಾಗಿಲು -ತಾ0ಗದಗಡಿ- ಗುಂಡಿಬೈಲು-ಕಲ್ಸ0ಕ ಮಾರ್ಗವಾಗಿ ಕಡ್ಡಾಯವಾಗಿ ಸಂಚರಿಸುವ0ತೆ ಸಂಬ0ದಪಟ್ಟ ಎಲ್ಲಾ ಬಸ್ಸು ಮಾಲೀಕರಿಗೆ ಆದೇಶಿಸಲಾಗಿದೆ. ತಪ್ಪಿದಲ್ಲಿ ಪರವಾನಿಗೆ ರದ್ದು ಪಡಿಸಲು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.