ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆ- ಶಾಲೆಗಳಿಗೆ ರಜೆ ನೀಡುವಂತೆ ಪೋಷಕರ ಒತ್ತಾಯ
ಉಡುಪಿ,ಜು.8(ಉಡುಪಿ ಟೈಮ್ಸ್ ವರದಿ): ಕರಾವಳಿ ಜಿಲ್ಲೆಯಲ್ಲಿ ಕಳೆದ ಕೆಳವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ಈಗಾಗಲೇ ಉತ್ತರ ಕನ್ನಡ ಹಾಗೂ ಮಂಗಳೂರು ತಾಲೂಕಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಉಡುಪಿ ಜಿಲ್ಲೆಯಲ್ಲಿ ಕೂಡ ಸೋಮವಾರ ಮುಂಜಾನೆಯಿಂದ ಭಾರೀ ಗಾಳಿ ಮಳೆ ಸುರಿಯುತ್ತಿದ್ದು ಕೆಲವೊಂದು ಶಾಲೆಯ ಆಡಳಿತ ಮಂಡಳಿ ರಜೆ ಘೋಷಿಸಿದೆ.
ಪೋಷಕರ ಮನವಿ: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಶಾಲೆಯ ರಜೆ ನೀಡುವಂತೆ ಪೋಷಕರು ಜಿಲ್ಲಾಡಳಿತವನ್ನು ಒತ್ತಾಯ ಮಾಡಿದ್ದಾರೆ.
ಹಲವು ತಗ್ಗು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಶಾಲೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇದ್ದರೂ ಜಿಲ್ಲಾಡಳಿತ ಇನ್ನೂ ರಜೆ ಘೋಷಣೆ ಮಾಡದೆ ಇರುವುದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲೆವೂರು ಶಾಂತಿನಿಕೇತನ, ಉಡುಪಿಯ ಮುಕುಂದ ಕೃಪಾ ಶಾಲೆ, ಸಾಲಿಯತ್ ಸಮೂಹ ಸಂಸ್ಥೆ, ವಾಸುದೇವ ಕೃಪಾ ಸಹಿತ ಉಡುಪಿಯಲ್ಲಿ ಕೆಲವು ಶಾಲೆಗಳ ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದೆ.
ಬೈಂದೂರು ತಾಲೂಕಿನ 19 ಶಾಲೆಗಳಿಗೆ ಸೋಮವಾರ (ಜು.8 ರಂದು) ರಜೆ ಘೋಷಣೆ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಬಂದುಹೋಗಲು ಕಷ್ಟವಾಗುವ ಕಡೆಗಳಲ್ಲಿ ರಜೆ ಘೋಷಣೆಗೂ ಸೂಚನೆ ನೀಡಿದ್ದೇವೆ. ಆಯಾ ಶಾಲಾ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡು ಪಾಲಕ – ಷೋಷಕರಿಗೆ ಸೂಚನೆ ನೀಡುವುದು ಮತ್ತು ಮಕ್ಕಳ ಸುರಕ್ಷತೆಗೆ ಹಚ್ಚಿನ ಆದ್ಯತೆ ನೀಡಲು ನಿರ್ದೇಶನ ಕೊಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿಡಿಪಿಐ ಕೆ.ಗಣಪತಿ ತಿಳಿಸಿದ್ದಾರೆ.
ಮುಖ್ಯಶಿಕ್ಷಕರಿಗೆ ಸೂಚನೆ:ಎಲ್ಲ ಮುಖ್ಯ ಶಿಕ್ಷಕರು ತಮ್ಮ ಶಾಲೆಗೆ ಸಂಬಂಧಿಸಿದಂತೆ ಮಳೆ ನೆರೆ, ಕಾಲುಸಂಕ, ಇತ್ಯಾದಿ ಗಳನ್ನು ಗಮನಿಸಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಅಗತ್ಯವೆಂದು ಕಂಡು ಬಂದಲ್ಲಿ ಶಾಲೆಗೆ ರಜೆ ನೀಡುವುದು. ಹಾಗೂ ಈ ಬಗ್ಗೆ ಶಿಕ್ಷಣ ಸಂಯೋಜಕರಿಗೆ ಹಾಗೂ ಸಿಆರ್ ಪಿ ಯವರಿಗೆ ಮಾಹಿತಿ ನೀಡುವುದು. ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮುಖ್ಯ ಶಿಕ್ಷಕರಾಗಿದ್ದು, ವಿವೇಚನೆಯಿಂದ ಕರ್ತವ್ಯ ನಿರ್ವಹಿಸುವುದು.
ರಜೆ ಅಗತ್ಯವಿಲ್ಲದಿದ್ದಲ್ಲಿ, ಮಳೆಯಿಂದ ಶಾಲೆಗೆ ಬರಲು ಅನಾನುಕೂಲ ವಾಗುವ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಪೋಷಕರಿಗೆ ತಿಳಿಸುವುದು.ಎಲ್ಲ ಅನುದಾನಿತ, ಸರಕಾರಿ ಹಾಗೂ ಅನುದಾನರಹಿತ ಶಾಲೆಗಳಿಗೆ ಅನ್ವಯಿಸುವಂತೆ ಸೂಚನೆ ನೀಡಲಾಗಿದೆ
Remove this dc we don’t want this type of dc old dc was better he gives Accordinv to the situation