ಎಲ್ಐಸಿಯ ನಿವೃತ್ತ ಉದ್ಯೋಗಿ ರಮೇಶ್ ಮಾರ್ಪಳ್ಳಿ ನಿಧನ

Oplus_131072

ಉಡುಪಿ: ಉಡುಪಿ ಜೀವ ವಿಮಾ ಸಂಸ್ಥೆಯಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ರಮೇಶ್ ಮಾರ್ಪಳ್ಳಿ(64) ಇಂದು ನಿಧನರಾಗಿದ್ದಾರೆ.

ಮೃತರು ಅಲ್ಪಕಾಲದ ಅಸೌಖ್ಯದಿಂದ ಇದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮೃತರು ಪತ್ನಿ ,ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ರಮೇಶ್ ಅವರು, ಬಾಲ್ಯದಲ್ಲಿಯೇ ಊರಿನ ದೇವಸ್ಥಾನ, ಗರೋಡಿ, ಬಬ್ಬುಸ್ವಾಮಿ ದೇವಸ್ಥಾನ, ಭಜನಾ ಮಂಡಳಿ, ಅಯ್ಯಪ್ಪ ಸ್ವಾಮಿ ಮಂದಿರ, ಗದ್ದಿಗೆ ಅಮ್ಮನ ದೇವಸ್ಥಾನ ಹೀಗೆ ಸ್ಥಳೀಯ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಇವರು ಗೆಳೆಯರ ಬಳಗ ಮಾರ್ಪಳ್ಳಿ ಸಂಘದ ಸ್ಥಾಪಕರಲ್ಲಿ ಓರ್ವರಾಗಿದ್ದರು.

Leave a Reply

Your email address will not be published. Required fields are marked *

error: Content is protected !!