21 ಐಎಎಸ್​ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ ಒಟ್ಟು 21 ಐಎಎಸ್​ ಅಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜುಲೈ 3 ರಂದು 25 ಐಪಿಎಸ್​ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿತ್ತು.

ವರ್ಗಾವಣೆಯಾದ ಎಲ್ಲ ಅಧಿಕಾರಿಗಳು ಕೂಡಲೇ ನೂತನ ಜಾಗಗಳಿಗೆ ರಿಪೋರ್ಟ್‌ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ ಕುಮಾರ್‌ ಎಸ್.‌ ನಿರ್ದೇಶಿಸಿದ್ದಾರೆ.

ಅಧಿಕಾರಿಗಳ ಹೆಸರು ಮತ್ತು ವರ್ಗಾವಣೆಯಾದವರ ವಿವರ
1. ಡಾ. ರಾಮ್‌ ಪ್ರಸಾದ್‌ ಮನೋಹರ್‌ ವಿ (ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ)

2. ನಿತೇಶ್‌ ಪಾಟೀಲ್‌ (ಎಂಎಸ್‌ಎಂಇ ನಿರ್ದೇಶಕ)

3. ಡಾ. ಅರುಂಧತಿ ಚಂದ್ರಶೇಖರ್‌ (ಪಂಚಾಯತ್‌ರಾಜ್‌ ಕಮಿಷನರ್‌)

4. ಜ್ಯೋತಿ ಕೆ (ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕಿ)

5. ಶ್ರೀಧರ ಸಿ.ಎನ್‌ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸೋಶಿಯಲ್‌ ಆಡಿಟ್‌ ನಿರ್ದೇಶಕ)

6. ಡಾ. ರಾಜೇಂದ್ರ ಕೆ.ವಿ (ಪ್ರವಾಸೋದ್ಯಮ ಇಲಾಖೆ ನಿರ್ದೇಶಕ)

7. ಚಂದ್ರಶೇಖರ ನಾಯಕ ಎಲ್. (ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ)

8. ವಿಜಯಮಹಾಂತೇಶ್‌ ಬಿ.ದಾನಮ್ಮನವರ್‌ (ಹಾವೇರಿ ಜಿಲ್ಲಾಧಿಕಾರಿ)

9. ಗೋವಿಂದ ರೆಡ್ಡಿ (ಗದಗ ಜಿಲ್ಲಾಧಿಕಾರಿ)

10. ರಘುನಂದನ್‌ ಮೂರ್ತಿ (ಖಜಾನೆ ಆಯುಕ್ತ ಬೆಂಗಳೂರು)

11. ಡಾ. ಗಂಗಾಧರಸ್ವಾಮಿ ಜಿ.ಎಂ (ದಾವಣಗೆರೆ ಜಿಲ್ಲಾಧಿಕಾರಿ)

12. ಲಕ್ಷ್ಮೀಕಾಂತ ರೆಡ್ಡಿ (ಮೈಸೂರು ಜಿಲ್ಲಾಧಿಕಾರಿ)

13. ನಿತೀಶ್‌ ಕೆ (ರಾಯಚೂರು ಜಿಲ್ಲಾಧಿಕಾರಿ)

14. ಮುಹಮ್ಮದ್‌ ರೋಶನ್‌ (ಬೆಳಗಾವಿ ಜಿಲ್ಲಾಧಿಕಾರಿ)

15. ಶಿಲ್ಪಾ ಶರ್ಮಾ (ಬೀದರ್‌ ಜಿಲ್ಲಾಧಿಕಾರಿ)

16. ದಿಲೇಶ್‌ ಸಸಿ (ಇ- ಆಡಳಿತ ಕೇಂದ್ರ ಸಿಇಒ ಬೆಂಗಳೂರು)

17. ಲೋಖಂಡೆ ಸ್ನೇಹಲ್‌ ಸುಧಾಕರ್‌ (ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ)

18. ಶ್ರೀರೂಪಾ (ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ)

19. ಜಿಟ್ಟೆ ಮಾಧವ ವಿಠಲ ರಾವ್ (ಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್‌ ಮ್ಯಾನೇಜರ್‌)

20. ಹೇಮಂತ್‌ ಎನ್. (ಶಿವಮೊಗ್ಗ ಜಿ.ಪಂ ಸಿಇಒ)

21.‌ ನಾಂಗ್‌ಜೈ ಮುಹಮ್ಮದ್‌ ಅಲಿ ಅಕ್ರಂ ಶಾ (ಹೊಸಪೇಟೆ ವಿಜಯನಗರ ಜಿ.ಪಂ ಸಿಇಒ)

Leave a Reply

Your email address will not be published. Required fields are marked *

error: Content is protected !!