ಮಣಿಪಾಲ: ಡ್ರಗ್ಸ್ ದಂಧೆಯಲ್ಲಿದ್ದ ವೈದ್ಯ ವಿದ್ಯಾರ್ಥಿಯ ಬಂಧನ
ಮಣಿಪಾಲ:(ಉಡುಪಿ ಟೈಮ್ಸ್ ವರದಿ) ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರರಿಗೆ ಬಂದ ಖಚಿತ ಮಾಹಿತಿ ಮೇಲೆ ಮಣಿಪಾಲದ ಅಪಾರ್ಟ್ ಮೆಂಟ್‌ಗೆ ಮೇಲೆ ದಾಳಿ ಮಾಡಿ 32 ಗ್ರಾಂ ವಿದೇಶಿ ಹೈಡ್ರೊವಿಡ್ ಗಾಂಜಾ , 9 ಗಾಂ ಬ್ರೌನ್ ಶುಗರ್ ಹಾಗೂ 25 MDMA ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ನಿಷೇದಿತ ಮಾದಕ ವಸ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 3,89,000/- ಆಗಿದ್ದು, ಕೆ ಎಮ್ ಸಿ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿ ಆದಿತ್ಯ ಪ್ರಭು (28)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತದೆ.
ಪ್ರಕರಣದಲ್ಲಿ ಅನೀಶ್ ರಾಜನ್(22) ಭಾಗಿಯಾಗಿರುವ ಖಚಿತ ಮಾಹಿತಿ ಇದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹಲವು ವಿದ್ಯಾರ್ಥಿಗಳು ಈ ದಂಧೆಯಲ್ಲಿ ಕೈಜೋಡಿಸಿದ್ದು, ಆರೋಪಿಗಳ ಶೀಘ್ರ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪೊಲೀಸರು. ಕಳೆದ 1 ತಿಂಗಳಿನಿಂದ ಈಚೆಗೆ ಉಡುಪಿ ಪೊಲೀಸರು ವಶಪಡಿಸಿಕೊಳ್ಳುತ್ತಿರುವ ಸಿಂಥೆಟಿಕ್ ಡ್ರಗ್ಸ್ ಗಳ 4ನೇ ಪ್ರಕರಣವಾಗಿರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಕುಮಾರ್ ಚಂದ್ರರವರು ತಮ್ಮ ತಂಡದ ಸದಸ್ಯರಾದ ಟಿ .ಆರ್ ಜೈ ಶಂಕರ್ ಡಿ ವೈ ಎಸ್ ಪಿ ಉಡುಪಿ , ಹರಿರಾಮ ಶಂಕರ್ ಎ ಎಸ್ ಪಿ ಕುಂದಾಪುರ , ಮಂಜುನಾಥ್ ಎಂ ಗೌಡ ಪಿ.ಐ ಮಣಿಪಾಲ , ರಾಜಶೇಖರ್ ಪಿ ಎಎಸ್ ಐ ಮಣಿಪಾಲ , ಉಡುಪಿ ಸಹಾಯಕ ಡ್ರಗ್ಸ್ ಕಂಟ್ರೋಲರ್ ನಾಗರಾಜ್,ಗ್ರಾಮ ಲೆಕ್ಕಾಧಿಕಾರಿಯಾದ ಗಿರೀಶ್ ಗೌರವಗೋಶ್ ಮತ್ತು ಉಪೇಂದ್ರ ಕುಮಾರ್ , ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಆದರ್ಶ, ಆನಂದಯ್ಯ , ಸುದೀಪ ಹಾಗೂ ಡಿ ವೈ ಎಸ್ ಪಿ ಕಛೇರಿಯ ಸಿಬ್ಬಂದಿಗಳಾದ ನವೀನ್ ಕುಮಾರ್ ಶಾಂತರಾಂ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಛೇರಿಯ ಸಿಬ್ಬಂದಿಗಳಾದ ಅಶೋಕ ಪಾಟಕರ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ .
ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಅನಿಶ್ ಎಂಬ ಅಮೇರಿಕಾ ಮೂಲದ ಅನಿವಾಸಿ ಭಾರತೀಯ ವಿದ್ಯಾರ್ಥಿಯನ್ನು ಇಂದು ವಶಕ್ಕೆ ಪಡೆದು ವಿಚಾರಣೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದು, ಇನ್ನೂ ಹಲವರ ಬಂಧನಕ್ಕೆ ತನಿಖಾ ತಂಡ ಬಲೆ ಬೀಸಿದೆ . ಹಾಗೆಯೇ ಡ್ರಗ್ಸ್ ವಿರುದ್ದ ಕಾರ್ಯಚರಣೆ ಇನ್ನೂಮುಂದುವರಿಯುತ್ತದೆ ಎಂದು ಮಾನ್ಯ ಉಡುಪಿ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ತಿಳಿಸಿರುತ್ತಾರೆ.
Lol.chinnara Lola, police aata. ha ha ha haa