ಗಾರೆ ಕಾರ್ಮಿಕರನ್ನು ಭೇಟಿ ಮಾಡಿ ಅವರೊಡನೆ ಕೆಲಸ ಮಾಡಿದ ರಾಹುಲ್ ಗಾಂಧಿ!

Oplus_131072

ಹೊಸದಿಲ್ಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಗಾರೆ ಕಾರ್ಮಿಕರನ್ನು ಭೇಟಿ ಮಾಡಿ, ದೈಹಿಕ ದುಡಿಮೆಯಲ್ಲಿ ತೊಡಗಿರುವವರಿಗೆ ಸಂಪೂರ್ಣ ಹಕ್ಕು ಮತ್ತು ಗೌರವವನ್ನು ಒದಗಿಸುವುದು ತಮ್ಮ ಜೀವನದ ಧ್ಯೇಯವಾಗಿದೆ ಎಂದು ಪ್ರತಿಪಾದಿಸಿದರು.

ದಿಲ್ಲಿಯ ಗುರು ತೇಜ್ ಬಹದ್ದೂರ್ ನಗರದಲ್ಲಿ ಗಾರೆ ಕಾರ್ಮಿಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ರಾಹುಲ್ ಗಾಂಧಿ ಅವರು ಕಾರ್ಮಿಕರೊಂದಿಗೆ ಸೇರಿ ಕೆಲಸ ಮಾಡಿದರು.

ತಮ್ಮ ವಾಟ್ಸಾಪ್ ಚಾನೆಲ್‌ನಲ್ಲಿ ಸಂವಾದದ ಚಿತ್ರಗಳನ್ನು ಹಂಚಿಕೊಂಡ ರಾಹುಲ್ ಗಾಂಧಿ, “ಇಂದು ಭಾರತದಲ್ಲಿ ದೈಹಿಕ ಶ್ರಮಕ್ಕೆ ಗೌರವವಿಲ್ಲ, ನಾನು ಈ ಹಿಂದೆಯೂ ಹೇಳಿದ್ದೆ – ಇಂದು ಜಿಟಿಬಿ ನಗರದಲ್ಲಿ ಕಾರ್ಮಿಕರನ್ನು ಭೇಟಿಯಾದ ನಂತರ ಈ ವಿಷಯ ದೃಢಪಟ್ಟಿದೆ” ಎಂದು ಪೋಸ್ಟ್ ಮಾಡಿದ್ದಾರೆ.

ಭಾರತದ ಕಾರ್ಮಿಕರು ಮತ್ತು ಕೈಯಿಂದ ಕೆಲಸ ಮಾಡುವವರಿಗೆ ಸಂಪೂರ್ಣ ಹಕ್ಕುಗಳು ಮತ್ತು ಗೌರವವನ್ನು ಒದಗಿಸುವುದು ನನ್ನ ಧ್ಯೇಯವಾಗಿದೆ” ಎಂದು ರಾಹುಲ್ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಕಾರ್ಮಿಕರನ್ನು ಭೇಟಿ ಮಾಡಿರುವುದನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, “ಇಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯ ಜಿಟಿಬಿ ನಗರದಲ್ಲಿ ಕಾರ್ಮಿಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ಈ ಕಷ್ಟಪಟ್ಟು ದುಡಿಯುವ ಕಾರ್ಮಿಕರು ಭಾರತದ ಆರ್ಥಿಕತೆಯ ಬೆನ್ನೆಲುಬು. ಅವರ ಭವಿಷ್ಯವನ್ನು ಭದ್ರಪಡಿಸುವುದು ನಮ್ಮ ಜವಾಬ್ದಾರಿ” ಎಂದು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!