ಉಡುಪಿ: ಜು.8 ರಂದು ವಂ| ವಲೇರಿಯನ್ ಮೆಂಡೊನ್ಸಾ ಅಂತ್ಯ ಸಂಸ್ಕಾರ
ಉಡುಪಿ: ಅತೀ ವಂದನೀಯ ಧರ್ಮಗುರು ಪೂಜ್ಯ ವಲೇರಿಯನ್ ಮೆಂಡೋನ್ಸಾ, ರೆಕ್ಟರ್, ಮಿಲಾಗ್ರಿಸ್ ಕಾಥೆಡ್ರಲ್ ಇವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಸೋಮವಾರ ಜುಲೈ 8 ರ ಮಧ್ಯಾಹ್ನ 12 ಗಂಟೆಗೆ ಮಿಲಾಗ್ರಿಸ್ ಇಗರ್ಜಿಯ ಪ್ರಾಂಗಣದಲ್ಲಿ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು.
ಅವರಿಗೆ ಪುಷ್ಪ ನಮನ ಸಲ್ಲಿಸುವವರಿದ್ದಲ್ಲಿ ಮಧ್ಯಾಹ್ನ 3:15 ರ ತನಕ ಅವಕಾಶವಿರುತ್ತದೆ. ಸಮಾಧಿ ಸ್ಥಳದ ಅಂತಿಮ ವಿಧಿ ವಿಧಾನದ ಬಲಿಪೂಜೆಯ ಸಂದರ್ಭದಲ್ಲಿ ಇಗರ್ಜಿಯ ಒಳಗೆ ಯಾರಿಗೂ ಪುಷ್ಪ ನಮನ ಸಲ್ಲಿಸುವ ಅವಕಾಶವಿರುವುದಿಲ್ಲ.
ಧರ್ಮಗುರುಗಳಿಗೆ, ಧರ್ಮ ಭಗಿನಿಯರಿಗೆ ಹಾಗೂ ಕುಟುಂಬಸ್ಥರಿಗೆ ಇಗರ್ಜಿಯ ಒಳಗೆ ಪ್ರತ್ಯೇಕ ಸ್ಥಳವನ್ನು ಕಾದಿರಿಸಲಾಗುವುದು.
ಸಮಾಧಿ ಭೂಮಿಯ ಸ್ಥಳಕ್ಕೆ ಕೇವಲ ಧರ್ಮಗುರುಗಳು, ಧರ್ಮ ಭಗಿನಿಯರು, ಕುಟುಂಬಸ್ಥರು ಹಾಗೂ ಆಡಳಿತ ಮಂಡಳಿಯ ಆಯ್ದ ಸದಸ್ಯರಿಗೆ ಮಾತ್ರ ಹಾಜರಿರಲು ಅವಕಾಶವಿರುವುದು.
ಧರ್ಮಗುರುಗಳು ಹಾಗೂ ಇತರರು ಸಮಾಧಿಯ ಸ್ಥಳದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಡೆಸಿ ಹೊರಬಂದ ನಂತರ, ಉಳಿದವರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಗುವುದು.
ಪಾರ್ಕಿಂಗ್ ವ್ಯವಸ್ಥೆ
- ಧರ್ಮಗುರುಗಳು, ಧರ್ಮ ಭಗಿನಿಯರು & ಕುಟುಂಬಸ್ಥರು ಇಗರ್ಜಿಯ ಹೊರ ಆವರಣದಲ್ಲಿ ಪಾರ್ಕ್ ಮಾಡಬಹುದು
- ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬರುವವರು ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಪಾರ್ಕ್ ಮಾಡಬೇಕು
3.ಇಗರ್ಜಿಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸುವವರು ಮಿಲಾಗ್ರಿಸ್ ಕಾಲೇಜಿನ ಆವರಣದಲ್ಲಿ ಪಾರ್ಕ್ ಮಾಡಬೇಕಾಗಿ ವಿನಂತಿ.
ಸ್ವಯಂಸೇವಕರು ತಮಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
ಸಾರ್ವಜನಿಕ ಸಂಪರ್ಕಾಧಿಕಾರಿ
ಉಡುಪಿ ಧರ್ಮಪ್ರಾಂತ್ಯ