ಉಡುಪಿ: ಸಮಾಜ ಸೇವಕ ಶೇಖ್ ವಾಹಿದ್‌ರಿಗೆ ಡಾಕ್ಟರೇಟ್ ಗೌರವ
ಉಡುಪಿ ಜು.2(ಉಡುಪಿ ಟೈಮ್ಸ್ ವರದಿ): ಗಲ್ಫ್ ದೇಶದಲ್ಲಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಉಡುಪಿ ಮೂಲದ ಡಾ. ಶೇಖ್ ವಾಹಿದ್ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.
ಉಡುಪಿ ಮೂಲದ ಡಾ.ಶೇಖ್ ವಾಹಿದ್ ಅವರ ಕೆಲಸ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಕೆನಡಾದ ಸಂಸ್ಥೆಯಾದ “ಬ್ರಾಂಪ್ಟನ್ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ ಬೆಂಗಳೂರಿನ “zion-A luxurious hotel” ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಎಚ್.ವಿ ಶಿವಪ್ಪ ಐಇಎಸ್, ರೆ. ಡಾ. ಜೋಸೆಫ್ ಕಂದಾಲ್, ಡಾ.ಆರ್.ಕೆ ಸ್ಯಾಮ್ಸನ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಡಾ.ಶೇಖ್ ವಾಹಿದ್ ಅವರು ಮಣಿಪಾಲದ ಸ್ಟಾರ್ ಪಿವಿಎಸ್ ಎಂಟರ್‌ಪ್ರೈಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಆರೋಗ್ಯ ಹಾಗೂ ಸುರಕ್ಷತಾ ವಿಭಾಗದ ಮಾಜಿ ವ್ಯವಸ್ಥಾಪಕರು ಆಗಿದ್ದರು. ಗಲ್ಫ್‌ನ ಸಲಹೆಗಾರರೂ ಆಗಿದ್ದರು. ಪ್ರಸ್ತುತ ಕೆಪಿಸಿಸಿಯ ಅಲ್ಪಸಂಖ್ಯಾತರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು ಸಮಾಜ ಸೇವಕರಾಗಿ ಮತ್ತು ಆರೋಗ್ಯ ಸುರಕ್ಷತಾ ಕ್ಷೇತ್ರದಲ್ಲಿ ಗಲ್ಫ್ ದೇಶಗಳಾದ್ಯಂತ ಕೆಲಸ ಮಾಡಿದ್ದಾರೆ.