ಬ್ರಹ್ಮಾವರ: ಎರಡು ತಂಡಗಳ ಹೊಡೆದಾಟ, ಮೂರು ಬೈಕ್ ಭಸ್ಮ

ಬ್ರಹ್ಮಾವರ: (ಉಡುಪಿ ಟೈಮ್ಸ್ ವರದಿ) ಕೊಳಲಗಿರಿ ಸರಕಾರಿ ಶಾಲೆಯ ಬಳಿ ಶನಿವಾರ ತಡ ರಾತ್ರಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಮೂರು ಬೈಕ್‌ಗಳನ್ನು ಸುಟ್ಟು ಹಾಕಿ ತಂಡವೊಂದು ಪರಾರಿಯಾಗಿದೆಂದು ತಿಳಿದು ಬಂದಿದೆ.

ಎರಡು ತಂಡವು ನಿನ್ನೆ ರಾತ್ರಿ ಬಾರೊಂದರಲ್ಲಿ ಕುಡಿದು ಗಲಾಟೆ ಮಾಡಿ ನಂತರ ತಮ್ಮ ಊರಿಗೆ ಹೋಗುತ್ತಿರುವ ಸಂದರ್ಭ ಈ ತಲವಾರು ಕಾಳಗ ನಡೆದಿದೆ ಎನ್ನಲಾಗಿದೆ.
ಕೊಳಲಗಿರಿಯ ಆಲ್ವಿನ್ ಮತ್ತು ನಾಗರಾಜ್ ಶನಿವಾರ ರಾತ್ರಿ ಬಾರ್‌ವೊಂದರಲ್ಲಿ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು, ನಂತರ ಇಬ್ಬರೂ ತಮ್ಮ ತಂಡದೊಂದಿಗೆ ರಾತ್ರಿ 12 ಗಂಟೆ ಸುಮಾರಿಗೆ ಸರಕಾರಿ ಶಾಲೆ ಬಳಿ ಜಮಾಯಿಸಿದ್ದರು ತಿಳಿದು ಬಂದಿದೆ.


ಆಲ್ವಿನ್ ಸ್ಥಳೀಯ ಯುವಕರಾದ ಬಾಲಕೃಷ್ಣ, ವಿಶಾಲ್, ಸೂರಜ್ ಮತ್ತು ಮೂವರ ಜೊತೆ ಹೋಗಿದ್ದು, ಇನ್ನೊಂದು ತಂಡದಲ್ಲಿ ಕೊಳಲಗಿರಿ ಮುಟ್ಟಿಕಲ್ ನಾಗರಾಜ್ ತನ್ನ ಏಳು ಜನ ಆತ್ರಾಡಿ ಮತ್ತು ಗರಡಿಮಜಲಿನ ಯುವಕರೊಂದಿಗೆ ಬಂದು ಹೊಡೆದಾಟ ಪ್ರಾರಂಭಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಾಗರಾಜ್‌ನ ತಂಡದಲ್ಲಿದ ಯುವಕರು ತಲವಾರ್ ಬೀಸಿದ ಪರಿಣಾಮ ಆಲ್ವಿನ್‌ನ ತಂಡದ ಓರ್ವನಿಗೆ ಗಂಭೀರ ಗಾಯವಾಗಿತ್ತು. ಇದರಿಂದ ಬೆದರಿದ ಆಲ್ವಿನ್ ತಂಡವು ಅಲ್ಲಿಂದ ಕಾಲ್ಕಿತ್ತಿದ್ದರು. ಓಡುವ ಭರದಲ್ಲಿ ಅವರು ಬಂದಿದ್ದ ಬೈಕ್‌ನ್ನು ಬಿಟ್ಟು ಪರಾರಿಯಾಗಿದ್ದರು. ನಂತರ ನಾಗರಾಜ್‌ನ ತಂಡದವರು ಅವರು ಬಿಟ್ಟು ಹೋದ ಮೂರು ಬೈಕ್‌ನ್ನು ಸುಟ್ಟು ಹಾಕಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಬೇಟಿ ಕೊಟ್ಟಿದ್ದು, ತನಿಖೆ ಮುಂದುವರಿಸಿದ್ದಾರೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!