ಪೆರ್ಡೂರು: ಪ್ರಾಮಾಣಿಕ ಅಧಿಕಾರಿಯಾಗಿ ಭ್ರಷ್ಟಚಾರ ನಿರ್ಮೂಲನೆ ಮಾಡಿ ಮಾಡಿದ್ದೇ ತಪ್ಪಾ..?

ಉಡುಪಿ ಜೂ.29(ಉಡುಪಿ ಟೈಮ್ಸ್ ವರದಿ): ಸಾರ್ವಜನಿಕ ಜನಸ್ಪಂದನಾ ಸಭೆಯಲ್ಲಿ ಮಹಿಳಾ ಪಿಡಿಒ ಸುಮನಾ ಅವರಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಗದರಿಸಿ ದರ್ಪ ತೋರಿದನ್ನು ಪೆರ್ಡೂರು ಗ್ರಾಮ ಪಂಚಾಯತಿಯ ಕಾಂಗ್ರೆಸ್ ಸದಸ್ಯರು ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಂಚಾಯತ್ ಸದಸ್ಯ ಸಂತೋಷ ಕುಲಾಲ್ ಅವರು, ಸುಮನಾ ಅವರು ಪೆರ್ಡೂರು ಪಂಚಾಯತ್‌ನಲ್ಲಿ ಪಿಡಿಒ ಆಗಿ ಅಧಿಕಾರ ಕೈಗೊಂಡ ಮೇಲೆ ಎಲ್ಲಾ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿ ಬ್ರಷ್ಟಚಾರ ನಿರ್ಮೂಲನೆ ಮಾಡಿ ಕಾನೂನು ಪಾಲನೆ ಮಾಡಿದ್ದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ಹಾಗೂ ಪಿಡಿಒ ಸುಮನಾ ಅವರು ಪೆರ್ಡೂರು ಪಂಚಾಯತ್‌ನಲ್ಲಿಯೇ ಉಳಿಯಬೇಕು. ಅವರನ್ನು ವರ್ಗಾವಣೆ ಮಾಡಲು ಒತ್ತಡ ತರುವುದು, ಅಥವಾ ಬೆದರಿಕೆ ಹಾಕಿ ಅವರನ್ನು ಟಾರ್ಗೆಟ್ ಮಾಡುವುದು ಕಂಡು ಬಂದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಚುನಾವಣೆಯಲ್ಲಿ ಮತದಾರರು ಕ್ಷೇತ್ರದಲ್ಲಿ ಅಭಿವೃದ್ಧಿ ಆಗದಿರುವುದನ್ನ ಮನಗಂಡು ಕಾಂಗ್ರೆಸ್‌ಗೆ ಮತ ಹಾಕಿದ್ದರೂ ಕೂಡ ಬಿಜೆಪಿಯು ವಾಮ ಮಾರ್ಗದ ಮೂಲಕ ಕುದುರೆ ವ್ಯಾಪಾರ ನಡೆಸಿ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದೆಂದು ಆರೋಪಿಸಿದರು. ಹಾಗೂ ಬಿಜೆಪಿಯು ತನ್ನ ಆಡಳಿತದಲ್ಲಿ ನಡೆಸುವ ಭ್ರಷ್ಟಾಚಾರಗಳಿಗೆ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಮೂರೇ ತಿಂಗಳಲ್ಲಿ ಮೂರು ಮಂದಿ ಪಿಡಿಒ ಗಳನ್ನ ಬಿಜೆಪಿ ವರ್ಗಾವಣೆ ಮಾಡಿದ್ದಾರೆ.

ಪೆರ್ಡೂರು ಗ್ರಾಮ ಪಂಚಾಯತಿಯಲ್ಲಿ ಖಾಯಂ ಅಕೌಂಟೆಂಟ್, ಕಾರ್ಯದರ್ಶಿ ಇಲ್ಲ. ತೆರಿಗೆ ವಸೂಲಿಗಾರರೂ ಇಲ್ಲ. ಇದನ್ನು ಪೂರೈಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಸದಸ್ಯರಾದ ದಿನೇಶ ಪೂಜಾರಿ, ಉದಯ್ ಕುಲಾಲ್, ರಾಘವೇಂದ್ರ ಟೈಲರ್, ಸತೀಶ್ ನಾಯಕ್, ಶೋಭ ಗಾಮ್ಸ್, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!