ಮಣಿಪಾಲ: ತಡರಾತ್ರಿ ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ- ಮಲಗಿದ್ದ ಇಬ್ಬರು ಪವಾಡ ಸದೃಶವಾಗಿ ಪಾರು
ಮಣಿಪಾಲ: ನಿಲ್ಲಿಸಿದ್ದ ಕಾರೊಂದು ಹೊತ್ತಿ ಉರಿದ ಘಟನೆ ಮಣಿಪಾಲದಲ್ಲಿ ತಡರಾತ್ರಿ ನಡೆದಿದೆ.
ಕುಂದಾಪುರದಿಂದ ಮಣಿಪಾಲ ಆಸ್ಪತ್ರೆಗೆ ಬಂದ ರೋಗಿಯ ಕಡೆಯವರು ಕಾರಿನಲ್ಲಿ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಎಂಐಟಿ ಬಸ್ ನಿಲ್ದಾಣದ ಇಳಿಜಾರಿನಲ್ಲಿ ಕಾರನ್ನು ನಿಲ್ಲಿಸಿ ಒಳಗಡೆ ಮಲಗಿದ್ದರಂತೆ. ಬೆಂಕಿ ಹತ್ತಿಕೊಂಡದ್ದು ಗೊತ್ತಾದ ತಕ್ಷಣ ಇಬ್ಬರೂ ಹೊರಗೆ ಬಂದು ಪಾರಾಗಿದ್ದಾರೆ. ಧಗಧಗಿಸಿ ಉರಿಯುತ್ತಿದ್ದಂತೆ ಹ್ಯಾಂಡ್ ಬ್ರೇಕ್ ಮುಕ್ತವಾದ ಕಾರು ಹಿಮ್ಮುಖವಾಗಿ ಚಲಿಸಿದೆ ಎನ್ನಲಾಗಿದೆ.