ಮದುವೆಗಾಗಿ ಮತಾಂತರ ಸ್ವೀಕಾರಾರ್ಹವಲ್ಲ: ಅಲ್ಲಾಹಾಬಾದ್ ಹೈಕೋರ್ಟ್

ಲಖನೌ: ಕೇವಲ ಮದುವೆಗಾಗಿ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲ್ಲಾಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ತಿಳಿಸಿದೆ. 

ಅಂತರ್ಧರ್ಮೀಯ ವಿವಾಹವಾದ ಜೋಡಿಗಳು ತಮಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದವು. ವಿಚಾರಣೆ ನಡೆಸಿದ ನ್ಯಾಯಾಲಯ, ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್ ನಗರದ ಜೋಡಿ ಪೊಲೀಸ್ ಭದ್ರತೆಗೆ ಮನವಿ ಮಾಡಿತ್ತಷ್ಟೇ ಅಲ್ಲದೇ ಮಹಿಳೆಯ ತಂದೆ ತಮ್ಮ ವಿವಾಹದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶನ ನೀಡುವುದಕ್ಕೆ ಕೋರಿತ್ತು.

ಪ್ರಿಯಾಂಶಿ ಅಲಿಯಾಸ್ ಸಮ್ರೀನ್ ಹಾಗು ಆಕೆಯ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಮಹೇಶ್ ಚಂದ್ರ ತ್ರಿಪಾಠಿ ಇದ್ದ ನ್ಯಾಯಪೀಠ, ಮಹಿಳೆ ಮುಸಲ್ಮಾನ ಮತಕ್ಕೆ ಸೇರಿದ್ದು, ಮದುವೆಗೂ ಒಂದು ತಿಂಗಳ ಮುಂಚೆಯಷ್ಟೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕೇವಲ ಮದುವೆಗಾಗಿ ಮತಾಂತರ ನಡೆದಿರುವುದು ಸ್ಪಷ್ಟವಾಗುತ್ತಿದೆ ಎಂದಿದ್ದು 2014 ರಲ್ಲಿ ನೂರ್ ಜಹಾನ್ ಬೇಗಮ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ್ದು, ಮದುವೆಗಾಗಿಯೇ ಮತಾಂತರಗೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದು, ಅರ್ಜಿಯನ್ನು ತಿರಸ್ಕರಿಸಿದೆ. 

Leave a Reply

Your email address will not be published. Required fields are marked *

error: Content is protected !!