ಹಾಲಿನ ದರಕ್ಕೆ ರಾಜಕೀಯ ಬೇಡ- ಉಡುಪಿ ಜಿಲ್ಲಾ ಕೃಷಿಕ ಸಂಘ
ಉಡುಪಿ: ಹೈನುಗಾರರು ಹೆಚ್ಚು ಹಾಲು ಉತ್ಪಾದಿಸುತ್ತಿರುವ ಹಿನ್ನೆಲೆಯಲ್ಲಿ ಕೆ.ಎಮ್.ಎಫ್ ಅದನ್ನು ಖರೀದಿಸಿ, ಜನರಿಗೆ ವಿತರಿಸುವ ಹಾಲಿನಲ್ಲಿ ಹೆಚ್ಚಳ ಮಾಡಿದೆ. ಅದಕ್ಕೆ ಅನುಸಾರವಾಗಿ 2 ರೂ. ಹೆಚ್ಚು ತೆಗೆದುಕೊಳ್ಳಲು ಮುಂದಾಗಿದೆ. ಇದರಿಂದ ಕೃಷಿಕರಿಗೆ ಮತ್ತು ಕೆ.ಎಮ್.ಎಫ್. ಇಬ್ಬರಿಗೂ ಒಳ್ಳೆಯದಾಗಲಿದೆ. ಇದು ಆಳುವ ಮತ್ತು
ವಿಪಕ್ಷಗಳಿಗೆ ರಾಜಕೀಯ ಕಿತ್ತಾಟದ ವಿಷಯವಾಗಿರುವುದು ಮಾತ್ರ ಖಂಡನೀಯ.
ರೈತರ ವಿಷಯದಲ್ಲಿ ರಾಜ್ಯದ ಎಲ್ಲ ಪಕ್ಷಗಳೂ ರಾಜಕೀಯ ಬಿಟ್ಟು ಕೃಷಿಕರ ಸಂಕಷ್ಟಗಳ ಪರಿಹಾರದ ಬಗ್ಗೆ ಚರ್ಚೆ
ಮಾಡುವಂತೆ ಉಡುಪಿ ಜಿಲ್ಲಾ ಕೃಷಿಕ ಸಂಘ ಒತ್ತಾಯಿಸುತ್ತದೆ. ವಿತರಿಸುವ ಹಾಲಿನ ಹೆಚ್ಚುವರಿ ಪ್ರಮಾಣಕ್ಕೆ ತಕ್ಕಂತೆ 2 ರೂ. ಹೆಚ್ಚಾಗಿದೆಯೇ ಹೊರತು ರಾಜಕೀಯದವರು ಬೊಬ್ಬಿಡುವಂತೆ ದರ ಏರಿಕೆಯಾಗಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೃಷಿಕರಿಗೆ ಸಿಗುವ ಹಾಲಿನ ದರ ಬಹಳ ಕಡಿಮೆ ಇದೆ. ಇಂದು ಹೈನುಗಾರಿಕೆ ನಡೆಸುವವರಿಗೆ ದನಕರುಗಳ ಸಾಕಾಣಿಕೆಯಲ್ಲಿ ತಗಲುವ ನಿರ್ವಹಣಾ ವೆಚ್ಚ, ಪಶುಗಳ ರೋಗ, ಗರ್ಭಧಾರಣಾ ಸಮಸ್ಯೆಗಳ ವೈದ್ಯಕೀಯ ಖರ್ಚು, ಮೇವು ದರ ಏರಿಕೆ, ದನ ಕಳ್ಳತನದ ಸಂಕಷ್ಟಗಳ ಹಿನ್ನೆಲೆಯಲ್ಲಿ ಹೈನುಗಾರಿಕೆಯನ್ನು ತೊರೆಯುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಹೀಗಾಗಿ ಈಗಾಗಲೇ ಬೇಡಿಕೆಯ ಪ್ರಮಾಣದಲ್ಲಿ ಹಾಲು ಪೂರೈಕೆ ಇರದೆ ರಾಜ್ಯದಲ್ಲಿ ರಾಸಾಯನಿಕ ಬಳಸಿ ನಕಲಿ ಹಾಲು ತಯಾರಕರು ಹುಟ್ಟಿಕೊಂಡು ನಗರವಲ್ಲದೆ ಹಳ್ಳಿಗಳಲ್ಲೂ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇದರ ಬಗ್ಗೆ ರಾಜಕೀಯ ಪಕ್ಷಗಳು ಮತ್ತು ಅಧಿಕಾರಸ್ಥರು ಪ್ರತಿಭಟನೆ ದಿಗ್ಬಂಧನ ಹೋರಾಟ ಮಾಡಿದರೆ ನಿಜಕ್ಕೂ ಜನರಿಗೆ ಮತ್ತು ಕೃಷಿಕರಿಗೆ ನ್ಯಾಯ ಒದಗಿಸಿದಂತಾಗುತ್ತದೆ.
ಸರಕಾರ ಕೂಡಾ ಹೈನುಗಾರರ ಹಿತಾಸಕ್ತಿ ಕಾಪಾಡಲು ಹಾಲಿನ ಖರೀದಿ ದರ ಕನಿಷ್ಠ 5 ರೂ. ಮತ್ತು ಸಹಾಯಧನ 10 ರೂ.ನಂತೆ ಏರಿಸಬೇಕು. ರೈತರಿಗೆ ಹಾಲು ಪೂರೈಕೆ ಲೀಟರೊಂದಕ್ಕೆ 50 ಉಡುಪಿ ಜಿಲ್ಲಾ ಕೃಷಿಕ ಸಂಘ ರೂ.ಗಳ ದರ ಸಿಗುವಂತೆ ಮಾಡಿ ಹೈನುಗಾರರನ್ನು ರಕ್ಷಿಸುವಂತೆ ಮುಖ್ಯಮಂತ್ರಿಯವರನ್ನು ಈ ಮೂಲಕ ಆಗ್ರಹಿಸುತ್ತಿದ್ದೇವೆ. ಒಂದು ವೇಳೆ ಹಾಲಿನ ದರ ಏರಿಸದಿದ್ದರೆ ಎಲ್ಲ ರೈತರೇ ಆಡಳೀತರೂಢರ ಸಹಿತ ಎಲ್ಲಾ ರಾಜಕೀಯ ಮುಖಂಡರ ಮನೆಯ ಮುಂದೆ ದಿಗ್ಬಂಧನ ಪ್ರತಿಭಟನೆ ನಡೆಸಲಿದ್ದೇವೆ:- ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ ಭಟ್, ರವೀಂದ್ರ ಗುಜ್ಜರಬೆಟ್ಟು.