ದೇಶದ ಮೊದಲ ಸೀ ಪ್ಲೇನ್ ನಲ್ಲಿ ಸಂಚರಿಸಿದ ಮೊದಲ ಪ್ರಧಾನಿ ಮೋದಿ

ಅಹ್ಮದಾಬಾದ್: ಗುಜರಾತ್ ನಲ್ಲಿ ಆರಂಭವಾದ ದೇಶದ ಮೊಟ್ಟ ಮೊದಲ ಸೀ ಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಸೀ ಪ್ಲೇನ್ ನಲ್ಲಿ ಹಾರಾಟ ನಡೆಸಿದರು. ಆ ಮೂಲಕ ದೇಶದ ಮೊದಲ ಸೀ ಪ್ಲೇನ್ ನಲ್ಲಿ ಹಾರಾಟ ನಡೆಸಿದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿಗೆ ಪಾತ್ರರಾದರು .

ಗುಜರಾತಿನ ಸಬರ್‌ಮತಿ ನದಿ ತೀರದಿಂದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಸೀಪ್ಲೇನ್‌ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು. ಸರ್ದಾರ್‌ ಪಟೇಲ್‌ ಅವರ 146ನೇ ಜನ್ಮ ದಿನದ ನಿಮಿತ್ತ ಈ  ಸೇವೆಯನ್ನು ಆರಂಭಿಸಲಾಗಿದ್ದು, ಇದು ದೇಶದ ಮೊಟ್ಟ ಮೊದಲ ಸೀಪ್ಲೇನ್‌ ವಿಮಾನ ವ್ಯವಸ್ಥೆಯಾಗಿದೆ. 

ಸೀಪ್ಲೇನ್‌ ವಿಮಾನ ಅಹಮದಾಬಾದ್‌ನ ನದಿ ತೀರದಿಂದ 10.15 ನಿಮಿಷಕ್ಕೆ ಹಾರಾಟ ಕೈಗೊಳ್ಳಲಿದ್ದು, 10.45ಕ್ಕೆ ಕೆವಾಡಿಯಾ ತಲುಪಲಿದೆ. ಅಂದರೆ ಕೇವಲ 30 ನಿಮಿಷದಲ್ಲಿ ಕೆವಾಡಿಯಾ ತಲುಪಲಿದೆ. ಕೆವಾಡಿಯಾದ ಸರ್ದಾರ್‌ ಸರೋವರ ಡ್ಯಾಮ್‌ನ ಹಿನ್ನೀರಿನಲ್ಲಿ ವಿಮಾನ ಇಳಿಯಲಿದೆ. 

ಏನಿದು ಸೀಪ್ಲೇನ್‌? 
ಇವು ಲಘು ವಿಮಾನಗಳಾಗಿದ್ದು, ನೀರು ಮತ್ತು ನೆಲದ ಮೇಲಿಂದ ಹಾರಾಟ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನದಲ್ಲಿ 19 ಆಸನಗಳು ಇದ್ದು, 14 ಮಂದಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು. ಸಬರ್‌ಮತಿ ರಿವರ್‌ಫ್ರಂಟ್‌ ಪ್ರದೇಶದಿಂದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಪ್ರತಿಮೆಗೆ  205 ಕಿ.ಮೀ. ದೂರ ಇದ್ದು, ಒಬ್ಬ ಪ್ರಯಾಣಿಕರಿಗೆ ಟಿಕೆಟ್‌ ದರ ಟಿಕೆಟ್‌ ದರ ಅಂದಾಜು 4,800 ರು. ಇರಲಿದೆ. ಪ್ರತಿ ದಿನ ವಿಮಾನ ಅಹಮದಾಬಾದ್‌ನಿಂದ ಕೆವಾಡಿಯಾಕ್ಕೆ 4 ಬಾರಿ ಮತ್ತು ಕೆವಾಡಿಯಿಂದ ಅಹಮದಾಬಾದ್‌ಗೆ 4 ಬಾರಿ ಸಂಚಾರ ಕೈಗೊಳ್ಳಲಿದೆ.

Leave a Reply

Your email address will not be published. Required fields are marked *

error: Content is protected !!