ಮಾಜಿ ಉಪ ಪ್ರಧಾನಿ, ಭಾರತ ರತ್ನ ಎಲ್.ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು
ನವದೆಹಲಿ, ಜೂನ್ 27: ಮಾಜಿ ಉಪ ಪ್ರಧಾನಿ, ಭಾರತ ರತ್ನ ಎಲ್ಕೆ ಅಡ್ವಾಣಿ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಏಮ್ಸ್ಗೆ ಬುಧವಾರ ರಾತ್ರಿ ದಾಖಲಿಸಲಾಗಿದೆ. ಈ ಕುರಿತು ಏಮ್ಸ್ ಪ್ರಕಟಣೆ ಹೊರಡಿಸಿದೆ.
ಅಡ್ವಾಣಿ ಆರೋಗ್ಯ ಸ್ಥಿರವಾಗಿದೆ ಮತ್ತು ಸದ್ಯ ಅಬ್ಸರ್ವೇಷನ್ನಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 96 ವರ್ಷ ವಯಸ್ಸಿನ ಅಡ್ವಾಣಿ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆದರೆ, ಅವರ ಆರೋಗ್ಯ ಸ್ಥಿತಿಯ ಕುರಿತು ಆಸ್ಪತ್ರೆಯು ಹೆಚ್ಚಿನ ವಿವರ ನೀಡಿಲ್ಲ.