ಅಲೆವೂರು ವಿಠಲ ಎಂ. ಶೆಣೈ ನಿಧನ
ಉಡುಪಿ: ಪತ್ರಿಕಾ ಏಜೆಂಟರಾದ ಅಲೆವೂರು ವಿಠಲ ಎಂ. ಶೆಣೈ (79) ಅಂಬಾಗಿಲಿನಲ್ಲಿರುವ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು.
ಮೃತರಿಗೆ ಪತ್ನಿ, ಪುತ್ರಿ ಹಾಗೂ ಪುತ್ರರಾದ ಪತ್ರಿಕಾ ಏಜೆಂಟ್ರಾದ ಪ್ರಕಾಶ್ ಶೆಣೈ, ಯತೀಶ್ ಶೆಣೈ ಮತ್ತು ಯೋಗೀಶ್ ಶೆಣೈ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಲೆವೂರಿನ ಗುಡ್ಡೆಯಂಗಡಿಯಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು ಸ್ಥಳೀಯವಾಗಿ ಬಹಳ ಚಿರಪರಿಚಿತರಾಗಿದ್ದರು.