ಮಣಿಪಾಲ: ರಿಕ್ಷಾ ನಿಲ್ದಾಣ ಉದ್ಘಾಟನೆ
ಮಣಿಪಾಲ: ನೂತನವಾಗಿ ನಿರ್ಮಿಸಲಾದ ಅನಂತ ನಗರ, ದಶರಥ ನಗರ, ಮಣಿಪಾಲ ಜನನಿ ಹಾಗೂ ಈಶ್ವರ ನಗರ ರಿಕ್ಷಾ ನಿಲ್ದಾಣ ಮತ್ತು ನವೀಕರಣಗೊಂಡ ಮಣಿಪಾಲ ಕೆ. ಎಂ. ಸಿ. ರಿಕ್ಷಾ ನಿಲ್ದಾಣ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಬುಧವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗಣ್ಯರಾದ ವೈಷ್ಣವಿ ದುರ್ಗಾ ದೇವಸ್ಥಾನ ಆಡಳಿತ ಮುಖ್ಯಸ್ಥರು ಅರ್ಬಿ ಇದರ ಸಿನೋಬ್ ಹಾಗೂ ಮಣಿಪಾಲ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ವಿಜಯ ಪುತ್ರನ್, ನಗರಸಭಾ ಸದಸ್ಯೆ ಕಲ್ಪನಾ ಸುಧಾಮ, ಮಂಜುನಾಥ ಮಣಿಪಾಲ, ವಿಜಯಲಕ್ಷ್ಮೀ, ಪೌರಾಯುಕ್ತ ರಾಯಪ್ಪ, ಪ್ರಧಾನ ಕಾರ್ಯದರ್ಶಿತ ಸಂತೋಷ್ ಶೆಟ್ಟಿ ಕೋಶಾಧಿಕಾರಿ ಲೋಕೇಶ್ ಪೂಜಾರಿ,
ಜೊತೆ ಕಾರ್ಯದರ್ಶಿಯಾದ ರವಿಚಂದ್ರ ಸೇರಿಗಾರ್ ಸಂಘಟನಾ ಕಾರ್ಯದರ್ಶಿಯಾದ ರಾಘವೇಂದ್ರ ನಾಯ್ಕ್ ಕ್ರೀಡ ಕಾರ್ಯದರ್ಶಿ ದಿನೇಶ್ ಹಾಗೂ ಉಪಾಧ್ಯಕ್ಷ ರಘುರಾಮ್ ನಾಯಿರಿ ಉಪಸ್ಥಿತರಿದ್ದರು.