ಉದ್ಯಾವರ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಜೀವನ್ ಡಿಸೋಜಾ ಆಯ್ಕೆ
ಉಡುಪಿ ಜೂ.25(ಉಡುಪಿ ಟೈಮ್ಸ್ ವರದಿ): ಉದ್ಯಾವರ ರೋಟರಿ ಕ್ಲಬ್ ಜೋನ್- 4 ಇದರ ನೂತನ ಅಧ್ಯಕ್ಷರಾಗಿ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿಸೋಜಾ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಕಾರ್ಯದರ್ಶಿಯಾಗಿ ಜೂದ್ ನೆಲ್ಸನ್ ಹಾಗೂ ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆನಂದ್ ಉದ್ಯಾವರ, ಜತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಕುಮಾರ್, ಖಜಾಂಚಿ ಯಾಗಿ ಸತೀಶ್ ಅವರು ಆಯ್ಕೆಯಾಗಿದ್ದಾರೆ.
ಹಾಗೂ ಕ್ಲಬ್ ಸೇವೆಯ ನಿರ್ದೇಶಕರಾಗಿ ದೀಕ್ಷಿತ್ ಎಸ್ ಶೆಟ್ಟಿ, ಯುವ ಸೇವೆಯ ನಿರ್ದೇಶಕರಾಗಿ ಗಿರಿಜಾ ಪೂಜಾರಿ, ಅಂತರಾಷ್ಟ್ರೀಯ ಸೇವೆಯ ನಿರ್ದೇಶಕರಾಗಿ ಜಾನ್ ಪೀಟರ್ ಲೀವಿಸ್, ಸಮೂಹ ಸೇವೆಯ ನಿರ್ದೇಶಕರಾಗಿ ರಾಜೇಶ್ ಡಿ ಪಾಲನ್, ವೃತ್ತಿಪರ ಸೇವೆಯ ನಿರ್ದೇಶಕರಾಗಿ ದಿನೇಶ್ ಸಾಲ್ಯಾನ್ ಅವರನ್ನು ಆಯ್ಕೆ ಮಾಡಲಾಯಿತು.