ಸರಕಾರಿ ನೌಕರರ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು : ಸರಕಾರಿ ನೌಕರರ ವರ್ಗಾವಣೆಗೆ ಮಂಗಳವಾರ ಮಾರ್ಗಸೂಚಿಸಿ ಪ್ರಕಟಿಸಿರುವ ರಾಜ್ಯ ಸರಕಾರವು, ಪ್ರಸಕ್ತ ಸಾಲಿನಲ್ಲಿ ಗ್ರೂಪ್ ‘ಎ, ಬಿ, ಸಿ ಮತ್ತು ಡಿ’ ಹುದ್ದೆಗಳಿಗೆ ಮಾಡಲಾಗುವ ವರ್ಗಾವಣೆಗಳ ಸಂಖ್ಯೆಯು ಒಂದು ಜೇಷ್ಟತಾ ಘಟಕದಲ್ಲಿ ಕಾರ್ಯನಿತರ ವೃಂದಬಲದ ಶೇ.6ರನ್ನು ಮೀರದಂತೆ ಜೂ.25ರಿಂದ ಜುಲೈ 9ರ ವರೆಗೆ ವರ್ಗಾವಣೆ ಕೈಗೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ.

ವರ್ಗಾವಣೆ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಪಾರದರ್ಶಕವಾಗಿರಬೇಕು. ಯಾವುದೇ ಸರಕಾರಿ ನೌಕರ ಕಡ್ಡಾಯ ನಿರೀಕ್ಷಣೆಯಲ್ಲಿ ಉಳಿಯುವ ಸಂದರ್ಭ ಉಂಟಾಗದಂತೆ ನೋಡಿಕೊಳ್ಳಬೇಕು. ಇಲಾಖೆ ವಿಚಾರಣೆ/ಕ್ರಿಮಿನಲ್ ಮೊಕದ್ದಮೆ ಬಾಕಿಯಿರುವ ನೌಕರನನ್ನು ಅವರು ಕೋರುವ ಹುದ್ದೆಗೆ ಸ್ಥಳನಿಯುಕ್ತಿ ಗೊಳಿಸಬಾರದು.

ಗ್ರೂಪ್ ‘ಎ’ ಎರಡು ವರ್ಷ, ಗ್ರೂಪ್ ‘ಬಿ’ ಎರಡು ವರ್ಷ, ‘ಸಿ’ ಮತ್ತು ‘ಡಿ’ ಕ್ರಮವಾಗಿ ಮತ್ತು ನಾಲ್ಕು ಮತ್ತು ಏಳು ವರ್ಷ ಸೇವಾವಧಿ ಪೂರ್ಣಗೊಳಿಸದ ಯಾವುದೇ ಸರಕಾರಿ ನೌಕರನನ್ನು ಸಾಧಾರಣವಾಗಿ ವರ್ಗಾವಣೆ ಮಾಡುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

ಪತಿ-ಪತ್ನಿ ಪ್ರಕರಣಗಳಲ್ಲಿ, ಸರಕಾರಿ ನೌಕರ ಅಥವಾ ಅವರ ಮಕ್ಕಳು ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದಲ್ಲಿ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರ ಪಡೆದಿದ್ದಲ್ಲಿ ಹಾಗೂ ವಿಶೇಷಚೇತನ ನೌಕರರನ್ನು ಹೊರತುಡಿಪಸಿ ಉಳಿದ ಎಲ್ಲ ನೌಕರರಿಗೆ ಮೇಲ್ಕಂಡ ನಿಯಮಗಳು ಅನ್ವಯವಾಗಲಿವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!