ಉಡುಪಿ: ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ಉದ್ಘಾಟನೆ
ಉಡುಪಿ: ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ (ರಿ) ಇದರ ಉದ್ಘಾಟನಾ ಸಮಾರಂಭವು ಕಿದಿಯೂರು ಶ್ರೀ ವಿದ್ಯಾ ಸಮುದ್ರ ತೀರ್ಥ ಪ್ರೌಢ ಶಾಲೆಯ ಸಭಾಂಗಣದಲ್ಲಿ ಜರುಗಿತು.
ದೀಪ ಬೆಳಗಿಸಿ ಉದ್ಘಾಟಿಸಿದ ಅನಂತ ಶ್ರೀ ವಿಭೂಷಿತ ಕಾಳಹಸ್ಥೇಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕೆ.ಜೆ. ಗಣೇಶ್ ಆಚಾರ್ಯ ಹಾಗೂ ಸಹೋದರರ ಸಾಧನೆ ಸಫಲವಾಗಲಿ ಆ ಮೂಲಕ ಯಕ್ಷಗಾನ ಜಗತ್ತನ್ನು ಬೆಳಗುವ ದೀಪವಾಗಲಿ ಎಂದು ಹರಸಿದರು.
ಶುಭಾಶಂಸನೆಗೈದ ಡಾ||ನಿ.ಬಿ. ವಿಜಯ ಬಲ್ಲಾಳರು ಕೆ. ಜೆ. ಸಹೋದರರ ಮನೆ ಕಲೆಯನ್ನು ಆರಾಧಿಸುವ ದೇವರು ಒಳ್ಳೆಯದನ್ನು ಮಾಡಲಿ ಎಂದರು. ಪ್ರೊ. ಉದ್ಯಾವರ ಮಾಧವ ಆಚಾರ್ಯರು ಮಾತನಾಡಿ ಒಳ್ಳೆಯ ಉದ್ದೇಶದಿಂದ ನಮ್ಮ ಮುಂದೆ ಬೆಳೆದ ಮಕ್ಕಳು ಹೆಜ್ಜೆ ಇಡುವಾಗ ಶುಭ ಹಾರೈಸುವುದು ಕರ್ತವ್ಯ ಎನ್ನುತ್ತಾ ಕಲೆಯ ಬಗ್ಗೆ ಸಮಾಜದ ಬಗ್ಗೆ ನಿಷ್ಠೆಯನ್ನು ತೋರಿಸುತ್ತಾ ಇದ್ದಾರೆ. ಹಿರಿಯರು ಬೆಳೆಸಿದ ಪರಂಪರೆ ಉಳಿಸಿ ಎಂದು ಶುಭ ಹಾರೈಸಿದರು.
ಪ್ರೊ. ಎಂ. ಎಲ್. ಸಾಮಗ, ಮುರಲಿ ಕಡೆಕಾರ್, ಎಂ.ಕೆ. ರಮೇಶ್ ಆಚಾರ್ಯ ಉದಯ ಕುಮಾರ್ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಗುಂಡು. ಬೀ. ಅಮೀನ್, ಪ್ರೊ. ರಾಧಾಕೃಷ್ಣ ಆಚಾರ್ಯ ಮತ್ತು ನಂದ ಕುಮಾರ್ ಶುಭ ಹಾರೈಸಿದರು.
ಎನ್. ಆರ್. ದಾಮೋದರ ಶರ್ಮಾ ಬಾರ್ಕೂರು ನಿರೂಪಿಸಿದರು. ಟ್ರಸ್ಟಿಗಳಾದ ಕೆ. ಜೆ. ಕೃಷ್ಣ, ಕೆ. ಜೆ. ಸುಧೀಂದ್ರ ಉಪಸ್ಥಿತರಿದ್ದರು. ಕೆ ಜಗದೀಶ್ ಆಚಾರ್ಯ ಧನ್ಯವಾದವಿತ್ತರು. ನಂತರ ಕೆ.ಜೆ. ಸಹೋದರರಿಂದ ಯಕ್ಷಗಾಯನ ನಡೆಯಿತು.