ಲಯನ್ಸ್ ಕ್ಲಬ್ ಸಂತೆಕಟ್ಟೆ: ನೂತನ ಪದಾಧಿಕಾರಿಗಳ ಪದಪ್ರಧಾನ

ಉಡುಪಿ ಜೂ.24(ಉಡುಪಿ ಟೈಮ್ಸ್ ವರದಿ): ಲಯನ್ಸ್ ಕ್ಲಬ್ ಸಂತೆಕಟ್ಟೆ ಇದರ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಮತ್ತು ಗವರ್ನರ್ ಅವರ ಅಧಿಕೃತ ಭೇಟಿಯ ಕಾರ್ಯಕ್ರಮವು ಉಡುಪಿಯ ಕಡಿಯಾಳಿಯಲ್ಲಿರುವ ಮಾಂಡವಿ ಟ್ರೇಡ್ ಸೆಂಟರ್‌ನ ಮಾಂಡವಿ ಸಭಾಭವನದಲ್ಲಿ ನಡೆಯಿತು.

ಈ ವೇಳೆ ಲಯನ್ಸ್ ಜಿಲ್ಲೆ 317C ಇದರ ಗವರ್ನರ್ ಲಯನ್ ನೇರಿ ಕರ್ನೆಲಿಯೋ ಅವರು ಮಾತನಾಡಿ, ಲಯನ್ಸ್ ಕ್ಲಬ್ ಆರೋಗ್ಯ, ಶಿಕ್ಷಣ , ಪರಿಸರ ಅಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಅಪಾರವಾದದ್ದು, ಕ್ಲಬ್‌ಗಳನ್ನು ಸ್ಥಾಮಿಸುವುದು ಸುಲಭ. ಆದರೆ ಅದನ್ನು ಯಶಸ್ವಿಯಾಗಿ ಮುನ್ನಡೆಸುವುದು ಮಹತ್ವದ ಸಾಧನೆ ಎಂದರು.

ಕಾರ್ಯಕ್ರಮದಲ್ಲಿ ಪದಪ್ರಧಾನ ಅಧಿಕಾರಿಯಾಗಿ ಭಾಗವಹಿಸಿದ ಪ್ರಥಮ ಜಿಲ್ಲಾ ಉಪ ಗವರ್ನರ್ ಎಂಜಿಎಫ್ ಲಯನ್ ಸಪ್ನ ಸುರೇಶ್ ಅವರು, ಹೊಸ ಹೊಸ ಅವಕಾಶಗಳನ್ನು ಮುಂದುವರೆಸುತ್ತಾ ಹೋದರೆ ಮತ್ತು ಘಟನೆ ಗೌರವ ಹೆಚ್ಚಿಸುವ ಕೆಲಸಗಳನ್ನು ಮಾಡುತ್ತಾ ಹೋದರೆ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ. ಸಮಾಜದ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು. ನಮ್ಮ ಸಮಾಜಮುಖಿ ಕಾರ್ಯಗಳನ್ನು ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕು ಎಂದರು.

ಲಯನ್ ಜೆರಿ ವಿನ್ಸೆಂಟ್ ಡಯಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 2024-25ನೇ ಸಾಲಿನ ಅಧ್ಯಕ್ಷರಾಗಿ ಯುವ ಉದ್ಯಮಿ, ಸಿಟಿ ಕೇಟರರ್ಸ್ ಮಾಲಕ ಲಯನ್ ಜೂಲಿಯಸ್ ಲುವಿಸ್, ಕಾರ್ಯದರ್ಶಿಯಾಗಿ ಲಯನ್ ಗಣೇಶ್ ಡಿ, ಕೋಶಾಧಿಕಾರಿಯಾಗಿ ಲಯನ್ ಹರಿಪ್ರಸಾದ್ ರಾವ್ ಮತ್ತು ಅವರ ತಂಡ ಪ್ರಮಾಣವಚನ ಸ್ವೀಕರಿಸಿದರು.

ವೇದಿಕೆಯಲ್ಲಿ ಪ್ರಥಮ ಉಪಗವರ್ನರ್ ಲಯನ್ ಮೊಹಮ್ಮದ್ ಹನೀಫ್, ಪ್ರಾಂತೀಯ ಅಧ್ಯಕ್ಷ ಲಯನ್ ಪ್ರಸಾದ್ ಶೆಟ್ಟಿ, ವಲಯ ಅಧ್ಯಕ್ಷ ಲಯನ್ ನಾರಾಯಣ ಬಿ ಎಸ್ ಸಹಿತ ಹಲವು ಲಯನ್ ಮುಖಂಡರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಲಯನ್ ಹೂಬರ್ಟ್ ಲೂಯಿಸ್ ವರದಿ ವಾಚಿಸಿದರೆ, ನೂತನ ಕಾರ್ಯದರ್ಶಿ ಲಯನ್ ಗಣೇಶ್ ಡಿ ಧನ್ಯವಾದ ಸಮರ್ಪಿಸಿದರು. ಲಯನ್ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!