ಪೆರ್ಡೂರು: ಕಾಲೇಜ್ ವಿದ್ಯಾರ್ಥಿನಿಯ ಅಪಹರಿಸಿದ ಅನ್ಯಕೋಮಿನ ಯುವಕ?
ಹಿರಿಯಡ್ಕ: (ಉಡುಪಿ ಟೈಮ್ಸ್ ವರದಿ) ಪೆರ್ಡೂರಿನ ಅಪ್ರಾಪ್ತ ಯುವತಿಯೊರ್ವಳನ್ನು ಅನ್ಯಕೋಮಿನ ಯುವಕನು ಅಪಹರಿಸಿದ್ದು, ಅಪಹರಣಕಾರರನ್ನು ಶೀಘ್ರ ಬಂಧಿಸ ಬೇಕೆಂದು ಹಿಂದೂ ಸಂಘಟನೆಗಳು ಒತ್ತಾಯಿಸಿದ್ದಾರೆ.
ಅ.28 ರಂದು ಯುವತಿಯು ಬೆಳಿಗ್ಗೆ ಸ್ಕಾಲರ್ ಶಿಪ್‌ನ ಅರ್ಜಿ ನೀಡಲು ಮನೆಯಿಂದ ಕಾಲೇಜ್‌ಗೆ ಹೋದವಳು ನಾಪತ್ತೆಯಾಗಿದ್ದಳು.
ಮಧ್ಯಾಹ್ನ ಮೂರು ಗಂಟೆ ನಂತರ ಯುವತಿಯ ಮೊಬೈಲ್ ಫೋನ್ ಸ್ವೀಚ್ ಆಫ್ ಆಗಿತ್ತು.
ಇದರಿಂದ ಹೆದರಿದ ಪೋಷಕರು ಅಂದು ಸಂಜೆ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರು.
ಯುವತಿಯನ್ನು ಪೆರ್ಡೂರಿನ ಅನ್ಯಕೋಮಿನ ಯುವಕನೊರ್ವ ಅಪರಿಸಿರುವ ಬಗ್ಗೆ ಯುವತಿ ಮನೆಯವರು ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ಕಾಲೇಜ್ ವಿದ್ಯಾರ್ಥಿನಿ ನಾಪತ್ತೆಯಾಗಿ 48 ಗಂಟೆಯಾದರೂ ಪತ್ತೆ ಹಚ್ಚದ ಪೊಲೀಸರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಹಿಂದೂ ಸಂಘಟನೆಯ ಮುಖಂಡರು ಆರೋಪಿಯನ್ನು ಶೀಘ್ರ ಬಂಧಿಸದಿದ್ದರೆ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
Strict and immediate action should be taken against the above said kidnappers.