ಉಡುಪಿ ಮಿಶನ್ ಆಸ್ಪತ್ರೆಯಲ್ಲಿ ಹೋಂ ಕೇರ್ ಸೇವೆ, ನೇತ್ರಶಾಸ್ತ್ರ ವಿಭಾಗ ಆರಂಭ
ಉಡುಪಿ ಜೂ.21(ಉಡುಪಿ ಟೈಮ್ಸ್ ವರದಿ): ಉಡುಪಿ ಲೊಂಬಾರ್ಡ್ ಸ್ಮಾರಕ(ಮಿಶನ್) ಆಸ್ಪತ್ರೆಯ 101ನೇ ವರ್ಷದ ಸ್ಮರಣೆಗಾಗಿ ಆರಂಭಗೊಂಡಿರುವ ಲೊಂಬಾರ್ಡ್ ಹೋಂ ಕೇರ್ ಸೇವೆ ಮತ್ತು ನೇತ್ರಶಾಸ್ತ್ರ ವಿಭಾಗದ ಉದ್ಘಾಟನಾ ಸಮಾರಂಭ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸಿಎಸ್‍ಐ ಕರ್ನಾಟಕ ದಕ್ಷಿಣ ಪ್ರಾಂತ್ಯದ ಬಿಷಪ್ ಹೇಮಚಂದ್ರ ಕುಮಾರ್ ಅವರು ಮಾತನಾಡಿ, ದೇವರು ಕೊಟ್ಟ ಅಧಿಕಾರ, ಅಂತಸ್ತನ್ನು ಜನರ ಅಭ್ಯುದಯಕ್ಕಾಗಿ ಸದ್ಭಳಕೆ ಮಾಡಬೇಕು. ಸಮಾಜಮುಖಿ ಕಾರ್ಯ, ಮಾದರಿ ಸೇವೆಯ ದಿಟ್ಟತನ ತೋರಿದ ಲೊಂಬಾರ್ಡ್ ಆಸ್ಪತ್ರೆ ಮೂಲಕ ಲೋಕಕ್ಕೆ ಸವಿರುಚಿ ಉಣಿಸಬೇಕು, ಉತ್ತಮ ಹಾದಿಯಲ್ಲಿ ಮುನ್ನಡೆಸುವ ಬೆಳಕು ತೋರಬೇಕು. ಹಾಗೂ ಆಸ್ಪತ್ರೆಗೆ ಬರಲಾಗದವರಿಗೆ ಸ್ಪಂದನೆ, ಆರೋಗ್ಯದ ಕಾಳಜಿ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಶನ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಅವರು ಮಾತನಾಡಿ, ಆಸ್ಪತ್ರೆಗೆ ಬರಲಾಗದ ಹಿರಿಯ ನಾಗರಿಕರಿಗಾಗಿ ಜನರ ಸಮಸ್ಯೆಗೆ ಸ್ಪಂದಿಸಲು ಹೋಂ ಕೇರ್ ಸೇವೆ ಆರಂಭಿಸಲಾಗಿದೆ. ರೋಗಿಗಳ ಪರೀಕ್ಷೆ, ನರ್ಸಿಂಗ್ ಕೇರ್ ಇಂದಿನ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೇತ್ರ ಶಾಸ್ತ್ರ ವಿಭಾಗದ ಮುಖ್ಯಸ್ಥ ಕರ್ನಲ್ ಡಾ. ಆರ್ಥರ್ ರಾಡ್ರಿಗಸ್, ಸಲಹೆಗಾರ ಡಾ. ನರೇಂದ್ರ ಶೆಣೈ, ಹಿರಿಯ ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್ ಮಾತನಾಡಿದರು. ಸಿಎಸ್‍ಐ ಕರ್ನಾಟಕ ದಕ್ಷಿಣ ಪ್ರಾಂತ್ಯದ ಮಹಿಳಾ ಅನ್ಯೋನ್ಯ ಕೂಟದ ಅಧ್ಯಕ್ಷೆ ಭಾರತಿ ಹೇಮಚಂದ್ರ, ಉಡುಪಿ ವಲಯಾಧ್ಯಕ್ಷ ಐವನ್ ಡಿ ಸೋನ್ಸ್, ಲೊಂಬಾರ್ಡ್ ಕಾಲೇಜ್ ಆಫ್ ನರ್ಸಿಂಗ್ ಸಹ ಪ್ರಾಧ್ಯಾಪಕಿ ಸೆಲೆಸ್ತಿನ್ ಸೂಸಾನ್, ಲಿಯೊನಾ ಸ್ಟ್ರೆಲಿಟಾ, ರೋಹಿ ರತ್ನಾಕರ್