ಕಾಪು: ಚಿನ್ನದ ಬ್ರಾಸ್‌ಲೆಟ್ ವಾರಸುದಾರರಿಗೆ ನೀಡಿ, ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕರು
ಕಾಪು: (ಉಡುಪಿ ಟೈಮ್ಸ್ ವರದಿ)ಪುರಸಭಾ ವ್ಯಾಪ್ತಿಯ ಮಲ್ಲಾರು ಕೊಪ್ಪಲಂಗಡಿ ಅನಸೂಯ ಎನ್ ಕ್ಲೇವ್‌ನ ನಿವಾಸಿಯೊರ್ವರ ಚಿನ್ನದ ಬ್ರಾಸ್‌ಲೇಟ್ ಕಳೆದು ಕೊಂಡಿದ್ದರು.
ಇಂದು ಕಾಪು ಪುರಸಭಾ ಪೌರಕಾರ್ಮಿಕರು ವಸತಿ ಸಮುಚ್ಚಯದ ಕಸ ಸಂಗ್ರಹಿಸುವಾಗ ಪತ್ತೆಯಾಗಿತ್ತು. ಆಭರಣವನ್ನು ಅದರ ಮಾಲಕರಿಗೆ ನೀಡುವ ಮೂಲಕ ಪ್ರಾಮಾಣಿಕತೆ ತೋರಿದ್ದಾರೆ.
ವಾರಸುದಾರರು ಕಳಕೊಂಡ 75 ಸಾವಿರ ಮೌಲ್ಯದ ಆಭರಣ ಹಿಂದಕ್ಕೆ ನೀಡಿದ ಪೌರ ಕಾರ್ಮಿಕರಿಗೆ, ನಗದು ಪುರಸ್ಕಾರ ನೀಡಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.