ಕುಂದಾಪುರ: ಬೀಜಾಡಿಯಲ್ಲಿ ಕಡಲಬ್ಬರಕ್ಕೆ ಓರ್ವ ನೀರುಪಾಲು

ಕುಂದಾಪುರ: ಸ್ನೇಹಿತನ ಮನೆಯಲ್ಲಿನ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಯುವಕರಿಬ್ಬರು ಸಮುದ್ರ ವಿಹಾರಕ್ಕೆ ತೆರಳಿದ್ದು ಈ ವೇಳೆ ಓರ್ವ ಅಲೆಗಳ ರಬಸಕ್ಕೆ ಸಿಕ್ಕಿ ಕೊಚ್ಚಿಹೋದ ಘಟನೆ ಬುಧವಾರ ಸಂಜೆ ವೇಳೆ ಕುಂದಾಪುರ ತಾಲೂಕಿನ ಬೀಜಾಡಿ ಎಂಬಲ್ಲಿ ನಡೆದಿದೆ.

ತಿಪಟೂರು ಮೂಲದ ಯೋಗೀಶ್ (23) ನೀರು ಪಾಲಾದವರು. ಇನ್ನೋರ್ವನನ್ನು ರಕ್ಷಣೆ ಮಾಡಲಾಗಿದೆ.

ಸಮುದ್ರಕ್ಕೆ ತೆರಳಿದ ಇಬ್ಬರು ತಿಪಟೂರು ಮೂಲದವರಾಗಿದ್ದು ಗುರುವಾರ ‌ನಡೆಯಲಿದ್ದ ವಿವಾಹ ಕಾರ್ಯಕ್ರಮಕ್ಕೆ ಸ್ನೇಹಿತನ ಆಮಂತ್ರಣದ ಮೇಲೆ ಬೀಜಾಡಿಗೆ ಆಗಮಿಸಿದ್ದರು. ಸಂಜೆ ವೇಳೆ ಸಮುದ್ರದ ಬಳಿ ತೆರಳಿದ್ದು ನೀರಿಗಿಳಿದ ಯೋಗೀಶ್ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. ಆತನ ಸ್ನೇಹಿತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇತ್ತೀಚಿನ ಒಂದೆರಡು ದಿನದಿಂದ ಗಾಳಿ-ಮಳೆ ಇರುವ ಕಾರಣ ಕಡಲು ಪ್ರಕ್ಷುಬ್ಧಗೊಂಡಿದ್ದು ಅಲೆಗಳು ಹೆಚ್ಚಿದೆ. ಸಂಜೆಯವರೆಗೂ ಕಾಣೆಯಾದ ಯುವಕನ ಹುಡುಕಾಟಕ್ಕೆ ಪೊಲೀಸರು, ಮೀನುಗಾರರು, ಸ್ಥಳೀಯರು ಹರಸಾಹಸಪಟ್ಟರು.

Leave a Reply

Your email address will not be published. Required fields are marked *

error: Content is protected !!