ಉಡುಪಿ: ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಮುಖಂಡ ಚೇರ್ಕಾಡಿ ವಿಜಯ್ ಹೆಗ್ಡೆ ನಿಧನ

Oplus_131072

ಉಡುಪಿ, ಜೂ.18(ಉಡುಪಿ ಟೈಮ್ಸ್ ವರದಿ): ಹಿರಿಯ ನ್ಯಾಯವಾದಿ, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಚೇರ್ಕಾಡಿ ವಿಜಯ್ ಹೆಗ್ಡೆ ಅವರು ಇಂದು ಮುಂಜಾನೆ ಅಂಬಲಪಾಡಿಯ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹೆಗ್ಡೆಯವರು ಉಡುಪಿ ನಗರಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದರು. ಇವರುˌ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದರು.

ಚೇರ್ಕಾಡಿ ವಿಜಯ ಹೆಗ್ಡೆಯವರು ಅಕಾಲಿಕ ನಿಧನದಿಂದ ಪಕ್ಷಕ್ಕೆ ಸದಾ ಮಾರ್ಗದರ್ಶನ ನೀಡುತ್ತಿದ್ದ ಹಿರಿಯ ನ್ಯಾಯವಾದಿಗಳನ್ನು ಕಳೆದುಕೊಂಡಂತಾಗಿದೆ.ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸುತ್ತಾ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು,ಪ್ರಸಾದ್‌ ರಾಜ್ ಕಾಂಚನ್,ರಮೇಶ ಕಾಂಚನ್,ಸದಾಶಿವ ಕಟ್ಟೆಗುಡ್ಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಕಾಲಿಕ ನಿಧನ ಹೊಂದಿದ ನ್ಯಾಯವಾದಿ ಚೇರ್ಕಾಡಿ ವಿಜಯ ಹೆಗ್ಡೆಯವರ ಪಾರ್ಥೀವ ಶರೀರವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಕೋರ್ಟ್ ಹಿಂಬದಿ ರಸ್ತೆಯ ಡಯಾನ ಸ್ಟೋರ್ ಸಮೀಪದ ಹೆಗ್ಡೆಯವರ ಕಚೇರಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಳಿಕ ಅವರ ಅಂತ್ಯಕ್ರೀಯೆಯು ಸಂಜೆ 6 ಗಂಟೆಗೆ ಚೇರ್ಕಾಡಿಯಲ್ಲಿರುವ ಅವರ ಸ್ವಗ್ರಹದಲ್ಲಿ ನೆರವೇರಲಿರುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!