ಸಮಾಜದಲ್ಲಿ ಒಳ್ಳೆಯ ಗುಣಗಳನ್ನು ಗುರುತಿಸುವ ಕಾರ್ಯ ಹೆಚ್ಚುಹೆಚ್ಚು ನಡೆಯ ಬೇಕು- ಪುತ್ತಿಗೆಶ್ರೀ

ಉಡುಪಿ, ಜೂ.17: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಯಕ್ಷರಂಗ ಕಲಾ ಸಂಸ್ಥೆ ವತಿಯಿಂದ ಮಿತ್ರ ಯಕ್ಷಗಾನ ಮಂಡಳಿ ಸರಳೇಬೆಟ್ಟು, ಮಿತ್ರ ಕಲಾನಿಕೇತನ ಟ್ರಸ್ಟ್, ಸರಳೇಬೆಟ್ಟು, ಯಕ್ಷಮಿತ್ರ ಯಕ್ಷಗಾನ ತರಬೇತಿ ಕೇಂದ್ರ ಸರಳೇಬೆಟ್ಟು, ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಪರ್ಕಳ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಇವುಗಳ ಸಹಯೋಗ ದೊಂದಿಗೆ ಕಲಾ ಸಾಧಕ ಪ್ರಶಸ್ತಿ ಪ್ರದಾನ ಹಾಗೂ 41ನೇ ವಾರ್ಷಿಕೋತ್ಸವ ಸಂಭ್ರಮವನ್ನು ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.

ಯಕ್ಷಗಾನ ವಿಮರ್ಶಕ ಕೇಶವ ಪ್ರಭು ಗಾವಳಿ ಕಲಾಸಾಧಕ ಪುರಸ್ಕಾರ, ಮಹಿಳಾ ಭಾಗವತೆ ರಕ್ತಾ ಹೆಗಡೆ ಸಿದ್ದಾಪುರ ’ಯಕ್ಷಶ್ರೀ’, ಯಕ್ಷಗಾನ ಕಲಾವಿದ ಯು.ಆನಂದ ’ಯಕ್ಷಮಿತ್ರಶ್ರೀ’, ನಿವೃತ್ತ ಮುಖ್ಯೋಪಾಧ್ಯಾಯ ಚೇರ್ಕಾಡಿ ಸದಾನಂದ ಪಾಟೀಲ್ ಸರ್ಪು ’ಯಕ್ಷಕಲಾಶ್ರೀ’, ಯಕ್ಷಗಾನ ಕಲಾವಿದ ಯಕ್ಷಾ ನಂದ ಕುತ್ಪಾಡಿ ’ಮಿತ್ರಕಲಾಶ್ರೀ’, ಮಾಯಾ ಕಾಮತ್ ’ಮಿತ್ರಶ್ರೀ’, ಯಕ್ಷಗಾನ ಕಲಾವಿದ ಸುಧಾಕರ ಶೆಟ್ಟಿ ‘ಕಲಾಶ್ರೀ’, ಇಂದ್ರಾಳಿ ಪ್ರಭಾಕರ ಆಚಾರ್ಯ ‘ಮಿತ್ರಯಕ್ಷಶ್ರೀ’, ಪ್ರಸಂಗಕರ್ತೆ ಶಾಂತಾ ವಾಸುದೇವ ಪೂಜಾರಿ ‘ಶ್ರೀಮಿತ್ರ’, ಸಂಗೀತ ನಿರ್ದೇಶಕಿ ಉಷಾ ಹೆಬ್ಬಾರ್ ‘ಶ್ರೀಮಿತ್ರವೈಭವ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಗುಣಗಳನ್ನು ಗುರುತಿಸಿದರೆ ಸಾಮರಸ್ಯ, ಸೌಹಾರ್ದತೆ ಬೆಳೆದರೆ, ಧ್ವೇಷವನ್ನು ಗುರುತಿಸುವುದರಿಂದ ದ್ವೇಷ, ಅಶಾಂತಿ ಮೂಡುತ್ತದೆ. ಆದುದರಿಂದ ಸಮಾಜದಲ್ಲಿ ಗುಣಗಳನ್ನು ಗುರುತಿಸುವ ಕಾರ್ಯ ಹೆಚ್ಚು ಹೆಚ್ಚು ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ವಿ.ಉದಯ ಕುಮಾರ್ ಶೆಟ್ಟಿ, ವಿಟ್ಲ ಜೋಶಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಹರೀಶ್ ಜೋಶಿ, ಬೈಕಾಡಿ ಕೃಷ್ಣಯ್ಯ ಪ್ರಶಸ್ತಿ ಪ್ರವರ್ತಕ ನರಹರಿ ಬಿ., ನಗರಸಭೆ ಸದಸ್ಯೆ ವಿಜಯಲಕ್ಷ್ಮಿ ಕಾಮತ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ, ಸ್ಥಾಪಾಕಾಧ್ಯಕ್ಷ ಉಪೇಂದ್ರ ನಾಯಕ್, ಮಿತ್ರ ಯಕ್ಷ ಗಾನ ಮಂಡಳಿ ಅಧ್ಯಕ್ಷ ಎಚ್.ಪ್ರಕಾಶ್ ಶಾನ್ಭಾಗ್, ಸ್ವಾಗತ ಸಮಿತಿ ಅಧ್ಯಕ್ಷ ಪ್ರೇಮಾನಂದ ಪೂಜಾರಿ, ಉಪಾಧ್ಯಕ್ಷ ಸತೀಶ್ ಎಸ್.ಕೆ.ಸಾಮಂತ್, ಸದಾನಂದ ಪ್ರಭು, ಶ್ರುತಿ ಶೆಣೈ, ಕಿಶನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!