ಬೆಳಪು: ಸೋಲಾರ್ ದೀಪಗಳ ಬ್ಯಾಟರಿ ಕಳ್ಳನ ಬಂಧಿಸಿದ ಸ್ಥಳೀಯರು
ಬೆಳಪು: ಗ್ರಾಮ ಪಂಚಾಯಾತ್ ದಾರಿ ದೀಪಕ್ಕಾಗಿ ಸೋಲಾರ್ ದೀಪಗಳನ್ನು ಅಳವಡಿಸಿದ ಬ್ಯಾಟರಿ ಕಳವು ಮಾಡುತ್ತಿದ್ದಾತನ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ದಾರಿ ದೀಪಕ್ಕಾಗಿ ಹಾಕಲಾಗಿದ್ದ ಸೋಲಾರ್‌ಗೆ ಅಳವವಡಿಸಲಾದ ಬ್ಯಾಟರಿಗಳು ಪ್ರತಿನಿತ್ಯ ಎಂಬಂತೆ ಕಳವಾಗುತಿತ್ತು. ಕಳ್ಳ ಪತ್ತೆಗೆ ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿಯವರು ಸ್ಥಳೀಯ ತಂಡವನ್ನು ರಚಿಸಿದ್ದರು.
ಶುಕ್ರವಾರ ಮುಂಜಾನೆ ಬ್ಯಾಟರಿಗಳ ಕಳ್ಳತನ ಮಾಡಿ ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದತನ ಸ್ಥಳೀಯ ಯುವಕರು ತಡೆದು ವಿಚಾರಿಸಿದಾಗ ಆತನ ಕೃತ್ಯ ಬೆಳಕಿಗೆ ಬಂದಿದೆ.
ಕಳ್ಳನ ಬಂಧಿಸಿದ ಸ್ಥಳೀಯರು ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿಯವರಿಗೆ ಮಾಹಿತಿ ನೀಡಿದ್ದಾರೆ. ನಂತರ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
.