ಉಡುಪಿ: ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ,ನರರೋಗ ತಜ್ಞ ಡಾ.ರಾಜಾ ಇನ್ನಿಲ್ಲ

Oplus_131072

ಉಡುಪಿ, ಜೂ.16(ಉಡುಪಿ ಟೈಮ್ಸ್ ವರದಿ) ಇಲ್ಲಿನ ಪ್ರಸಿದ್ಧ ಆಸ್ಪತ್ರೆಯಾದ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ, ನರರೋಗ ತಜ್ಞರಾದ ಡಾ.ರಾಜಾ(73) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.

ಇಂದು ಬೆಳಿಗ್ಗೆ ಮಣಿಪಾಲದ ರಾಜೀವ್ ನಗರದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದರೂ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.

ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತಿಮ ದರ್ಶನ ಇಂದು ಮಧ್ಯಾಹ್ನ 1 ಗಂಟೆಯಿಂದ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಹಾಗೂ 2.30ರಿಂದ ಡಾ.ಎ.ರಾಜಾ ಅವರ ಸ್ವಗೃಹ ಮಣಿಪಾಲದ ರಾಜೀವ ನಗರದಲ್ಲಿ ಜೂ.17 ಸೋಮವಾರ ಬೆಳಿಗ್ಗೆ 10.30ವರೆಗೆ ನಡೆಯಲಿದೆ.

ದೇಶದ ಖ್ಯಾತ, ಹಿರಿಯ ನರರೋಗ ತಜ್ಞ ಹಾಗೂ ಉಡುಪಿ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ| ಎ. ರಾಜ ಅವರ ಆಕಸ್ಮಿಕ ಅಗಲುವಿಕೆಯಿಂದ ಆಘಾತವಾಗಿದೆ. ಅವರ ಅಗಲುವಿಕೆ ಸಮಾಜಕ್ಕೆ ಹಾಗೂ ವೈದ್ಯಕೀಯ ಲೋಕಕ್ಕೆ ತೀವ್ರ ನಷ್ಟವಾಗಿದೆ.

ಆಗಲಿದ ಅವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲೆಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಶೀ ಈಶಪ್ರಿಯತೀರ್ಥ ಶ್ರೀಪಾದರು ಆರಾಧ್ಯದೇವರಾದ ಕಾಲೀಯಮರ್ದನ ಶ್ರೀಕೃಷ್ಣ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಂತಾಪ ಹಿರಿಯ ವೈದ್ಯರು, ಖ್ಯಾತ ನರರೋಗ ತಜ್ಞರಾದ ಡಾl ರಾಜಾ ಅವರು ದೈವಾಧೀನರಾದ ಸುದ್ದಿ ತಿಳಿದು ಮನಸಿಗೆ ಅತ್ಯಂತ ದುಖವಾಯಿತು.

ಸರಳ ವ್ಯಕ್ತಿತ್ವದ ಡಾl ರಾಜಾ ನರರೋಗ ವಿಭಾಗದಲ್ಲಿ ಪ್ರಖ್ಯಾತರಾಗಿ ಜನಾನುರಾಗಿಯಾಗಿದ್ದರು. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.

ಪ್ರೊ, ಡಾ.ರಾಜಾ ನಿದನಕ್ಕೆ ಸೊರಕೆ ಸಂತಾಪ
ಹಿರಿಯ ನರರೋಗ ತಜ್ಞ ವೈದ್ಯಕೀಯ ರಂಗದ ಭೀಷ್ಮ ತನ್ನ ಸೇವಾ ಅವಧಿಯಲ್ಲಿ ಸಾವಿರಾರು
ಶಸ್ತ್ರಚಿಕಿತ್ಸೆಯನ್ನು ನಡೆಸಿ ಅದೆಷ್ಟೋ ಜೀವವನ್ನು ಉಳಿಸಿದ ಪುನರ್ ಜನ್ಮನೀಡಿದ ಬ್ರಹ್ಮ. ದೇಶ ಹಾಗೂ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದ ದೇಶದ ನ್ಯೂರೋ ಸರ್ಜರಿ ವಿಭಾಗದ ವೈದ್ಯಕೀಯ ಸಂಘದ ಮುಖ್ಯಸ್ಥರಾಗಿ ಹಲವು ವೈದ್ಯರುಗಳಿಗೆ ತನ್ನ ಜ್ಞಾನವನ್ನು ದಾರೆ ಎರೆದು ಮುಖ್ಯವಾಹಿನಿಗೆ ತಂದ ಬಹಳ ದೊಡ್ಡ ವ್ಯಕ್ತಿತ್ವದ ಪ್ರೊ,ಡಾ.ರಾಜರವರ ನಿಧನಕ್ಕೆ ಮಾನ್ಯ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ತನ್ನ ಸಂತಾಪವನ್ನು ಸೂಚಿಸಿದ್ದು ಇದೊಂದು ಸಾರ್ವಜನಿಕರಿಗೆ ಹಾಗೂ ವೈದ್ಯಕೀಯ ರಂಗಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿರುತ್ತಾರೆ.

ಮಾಜಿ ಶಾಸಕ ಕೆ. ರಘುಪತಿ ಭಟ್ ಸಂತಾಪ: ಹಿರಿಯ ವೈದ್ಯರು, ಖ್ಯಾತ ನರರೋಗ ತಜ್ಞರಾದ ಡಾ. ರಾಜಾ ಅವರ ಅಗಲಿಕೆಯ ಸುದ್ದಿ ತಿಳಿದು ಮನಸಿಗೆ ಅತ್ಯಂತ ದುಖವಾಯಿತು.

ಅತ್ಯಂತ ಸರಳ ವ್ಯಕ್ತಿತ್ವದ ಡಾll ರಾಜಾ ನರರೋಗ ವಿಭಾಗದಲ್ಲಿ ಪ್ರಖ್ಯಾತರಾಗಿ ಜನಾನುರಾಗಿಯಾಗಿದ್ದರು. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.

Leave a Reply

Your email address will not be published. Required fields are marked *

error: Content is protected !!