ಉಡುಪಿ: ಟ್ಯಾಕ್ಸಿಗಳಿಗೆ ಸಬ್ಸಿಡಿ ತೈಲ ವಿತರಿಸಿ- ಶ್ರೀರಾಮ ಸೇನೆ ಆಗ್ರಹ

ಉಡುಪಿ: ಪ್ರತೀ ಬಾರಿ ತೆರಿಗೆ ವಿಷಯ ಬಂದಾಗ ಮೊದಲಿಗೆ ಟ್ಯಾಕ್ಸಿಗಳ ಮೇಲೆ ಯಾಕೆ ಹೊರೆ ಹಾಕುತ್ತೀರಿ? ಮತ್ತು ಸರಕಾರಗಳು ಟ್ಯಾಕ್ಸಿಯವರಿಗೆ ಏನು ಮಾಡಿದೆ?

ಈಗಾಗಲೇ ರಾಜ್ಯ ಸರಕಾರದ ಕೆಲವು ತೆರಿಗೆ ನಿಯಮದಿಂದ ಟ್ಯಾಕ್ಸಿ ಮಾಲಕರು ಸತ್ತಂತಾಗಿದೆ.
ಪ್ರತೀ ಬಾರಿಯೂ ಚುನಾವಣೆ ಮತ್ತು ಇನ್ನಿತರ ಸರಕಾರದ ಕೆಲಸಕ್ಕೆ ಟ್ಯಾಕ್ಸಿಗಳು ಬೇಕು. ಆದರೆ ನಂತರ ಟ್ಯಾಕ್ಸಿಗಳನ್ನು ಕಡೆಗಣಿಸುವುದು ರಾಜ್ಯ ಸರಕಾರಕ್ಕೆ ಅದರಲ್ಲೂ ಈಗಿನ ಮುಖ್ಯಮಂತ್ರಿಗಳ ಜಾಯಮಾನವಾಗಿದೆ.

ಕರ್ನಾಟಕದ ತೆರಿಗೆ ಏರಿಸಿ, ಹೊರ ರಾಜ್ಯದ ಪ್ರವಾಸಿಗಳು ಈ ರಾಜ್ಯಕ್ಕೆ ಬರದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಹೈರಾಣಗಿರುವ ಟ್ಯಾಕ್ಸಿಗಳಿಗೆ ಮತ್ತೆ ಡೀಸೆಲ್ ಪೆಟ್ರೋಲ್ ದರ 3.00/3.50 ರೂ ಏರಿಸುವ ಮೂಲಕ ಬರೆ ಎಳೆದಿದ್ದಾರೆ. ಈ ತೈಲ ಏರಿಕೆಯಿಂದ ಜನ ಸಾಮಾನ್ಯರ ಪಾಡೇನು? ನಿಮ್ಮ ಗ್ಯಾರಂಟಿ ಯೋಜನೆಗಳಿಗಾಗಿ ತೈಲ ಏರಿಕೆ ಮಾಡಿದ್ದೀರಿ ಎಂಬುದು ನಗ್ನ ಸತ್ಯ,

ಆದರೆ ನಿಮ್ಮ ಗ್ಯಾರಂಟಿಗಳಿಗಾಗಿ ಮತ್ತಷ್ಟು ಕುಟುಂಬಗಳನ್ನು ಬಲಿ ಕೊಡಬೇಡಿ. ನಿಮ್ಮ ಗ್ಯಾರಂಟಿಗಳಿಗೆ ಪಕ್ಷದ ಹಣವನ್ನು ಬಳಸಿ.
ಕೂಡಲೇ ಡೀಸೆಲ್ ದರ ಕಡಿಮೆ ಮಾಡಿ ಇಲ್ಲವೇ ಟ್ಯಾಕ್ಸಿಗಳಿಗೆ ಡೀಸೆಲ್ ಸಬ್ಸಿಡಿ ನೀಡಿ. ಇಲ್ಲವೇ ಯಾವುದೇ ಸರಕಾರಿ ಕಾರ್ಯಕ್ರಮಕ್ಕೆ ಟ್ಯಾಕ್ಸಿಗಳನ್ನು ಬಳಸಬೇಡಿ.

ತೈಲ ಬೆಲೆ ಏರಿಕೆ ವಿಷಯದಲ್ಲಿ ರಾಜ್ಯ ಶ್ರೀರಾಮ ಸೇನೆಯು ಟ್ಯಾಕ್ಸಿ ಚಾಲಕರ ಪರವಾಗಿ ನಿಲ್ಲುತ್ತದೆ ಎಂದು ಸಂಘಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ, ಹಾಗೂ ಉಡುಪಿ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!