ಉಡುಪಿ: ಜೂ.15-ಮಿಸ್ಟರ್&ಮಿಸ್ ಕೋಸ್ಟಲ್-2024 ಬ್ಯೂಟಿ ಕ್ವೀನ್ ಕಾಂಟೆಸ್ಟ್
ಉಡುಪಿ ಜೂ.13(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಜಯಲಕ್ಷ್ಮಿ ಸಿಲ್ಕ್ಸ್ ಹಾಗೂ ಆಭರಣ ಜುವೆಲ್ಲರ್ಸ್ ಇದರ ಜಂಟಿ ಆಶ್ರಯದಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕೋಸ್ಟಲ್ 2024 ಬ್ಯೂಟಿ ಕ್ವೀನ್ ಕಾಂಟೆಸ್ಟ್ ಉಡುಪಿಯ ಮಣಿಪಾಲ್ ಇನ್ ಹೋಟೆಲ್‌ನ ಗ್ರಾಂಡ್ ಮಿಲೇನಿಯಂ ಹಾಲ್ ನಲ್ಲಿ ಜೂನ್ 15ರಂದು ಸಂಜೆ 4 ಗಂಟೆಯಿಂದ ನಡೆಯಲಿದೆ
ಕಾರ್ಯಕ್ರಮವನ್ನು ಜಿ.ಎಸ್ ಶ್ಯಾಮಿಲಿ ಇಂಫ್ರಾ ಅಂಬಲಪಾಡಿ ಇದರ ಅಧ್ಯಕ್ಷರಾದ ಶ್ಯಾಮಿಲಿ ಜಿ ಶಂಕರ್ ಅವರು ಉದ್ಘಾಟಿಸಲಿದ್ದಾರೆ. ಡಾಕ್ಟರ್ ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಡಾ ನಿಕೇತನ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸ್ ಇದರ ಸಿಂಡಿಕೇಟ್ ಸದಸ್ಯರಾದ ಯು ಟಿ ಇಫ್ತಿಕಾರ್ ಅಲಿ, ಜಯಲಕ್ಷ್ಮಿ ಸಿಲ್ಕ್ಸ್ ಉಡುಪಿ ಇದರ ವ್ಯವಸ್ಥಾಪಕ ನಿರ್ದೇಶಕ ವೀರೇಂದ್ರ ಹೆಗ್ಡೆ, ಆಭರಣ ಜುವೆಲ್ಲರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಕಾಮತ್, ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಸೂರ್ಯಕಾಂತ್ ಜಿ ಸುವರ್ಣ, ಎಶಸನ್ ಮಣಿಪಾಲ್ ಇನ್ ಇದರ ವ್ಯವಸ್ಥಾಪಕ ನಿರ್ದೇಶಕ ಮೌಲಾನ ಇಬ್ರಾಹಿಂ, ನಟಿ ಸುಕೃತ ವಾಗ್ಳೆ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ವಂದನ ರೈ , ನಿಶ್ಚಿತ ಸುವರ್ಣ, ಮಾಡೆಲ್‌ಗಳಾದ ಸೂರಜ್ ಸನಿಲ್, ಆಸ್ತಿಕ್ ಅವಿನಾಶ್ ಶೆಟ್ಟಿ, ಮಿಸ್ ಇಂಟರ್ನ್ಯಾಷನಲ್ ಇಂಡಿಯಾ ಯೂನಿವರ್ಸ್ 2022 ಇದರ ರನ್ನರ್ ಅಪ್ ಹಾಗೂ 2024 ರ ಮಿಸ್ ಗ್ರ್ಯಾಂಡ್ ಇಂಡಿಯಾ ಇದರ ಫೈನಲಿಸ್ಟ್ ಸ್ಪೂರ್ತಿ ಡಿ ಶೆಟ್ಟಿ , ಸೂಪರ್ ಗ್ಲೋಬ್ ಇಂಟರ್ನ್ಯಾಷನಲ್ 2023 ಇದರ ಮಿಸ್ ಟೀನ್ ಯಶಸ್ವಿನಿ ದೇವಾಡಿಗ, ನಟ ನಿರ್ಮಾಪಕರಾದ ಸೂರ್ಯೋದಯ ಪೆರಂಪಳ್ಳಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಬಂಟರ ಸಂಘ ಪಡುಬಿದ್ರಿ ಇದರ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಪಡುಬಿದ್ರೆ ವ್ಯವಸಾಯ ಸಹಕಾರಿ ಸೇವಾ ಸಂಘ ಇದರ ಅಧ್ಯಕ್ಷ ವೈ ಸುಧೀರ್ ಕುಮಾರ್, ಪಡುಬಿದ್ರೆ ಪಲ್ಲವಿ ಬಾರ್ ಅಂಡ್ ರೆಸ್ಟೋರೆಂಟ್‌ನ ಸಂತೋಷ್ ಕುಮಾರ್ ಶೆಟ್ಟಿ, ಜೆಸಿಐ ಇಂಡಿಯಾ ಇದರ ನಿರ್ದೇಶಕ ವೈ ಸುಕುಮಾರ್, ಮಜೂರಿನ ಗ್ರೀನ್ ವುಡ್ ರೆಸಾರ್ಟ್‌ನ ದೀಪಕ್ ಎರ್ಮಳ್, ರಾಗ್ ರಂಗ್ ಕಲ್ಚರಲ್ ಕ್ಲಬ್ ಪಡುಬಿದ್ರೆ ಇದರ ವಿಶ್ವಾಸ್ ವಿ ಅಮೀನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.