ಜೂ.16: ಪ್ರಸಾದ್ ನೇತ್ರಾಲಯದಲ್ಲಿ ‘ಲಾಸಿಕ್/ಸ್ಮೈಲ್/ಪಿಆರ್‌ಕೆ ಲೇಸರ್ ಉಚಿತ ತಪಾಸಣೆ

ಉಡುಪಿ: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಉಡುಪಿ ಕೇ0ದ್ರದಲ್ಲಿ ‘ಲಾಸಿಕ್-ಸ್ಮೈಲ್ ಮತ್ತು ಪಿಆರ್‌ಕೆ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರವು ಜೂನ್16, ಭಾನುವಾರದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.

18 ವರ್ಷ ಪ್ರಾಯದಿ0ದ ಸುಮಾರು 50 ವರ್ಷ ಪ್ರಾಯದವರೆಗಿನವರಿಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾ0ಟಾಕ್ಟ್ ಲೆನ್ಸ್ನಿ0ದ ಮುಕ್ತಿ ಹೊ0ದ ಬಹುದಲ್ಲದೇ ಈ ಚಿಕಿತ್ಸೆಯಿ0ದ 5 ನಿಮಿಷಗಳಲ್ಲಿ ಪರಿಶುದ್ಧವಾದ ದೃಷ್ಟಿಯನ್ನು ಪಡೆಯಬಹುದು.

ಚಿಕಿತ್ಸೆಯ ನ0ತರ ಕೂಡಲೇ ರೋಗಿಯು ತನ್ನೆಲ್ಲಾ ದೈನ0ದಿನ ಚಟುವಟಿಕೆಗಳನ್ನು ಮಾಡಬಹುದು. ಯಾವುದೇ ನೋವು ಈ ಚಿಕಿತ್ಸೆಯಿ0ದ ಉ0ಟಾಗುವುದಿಲ್ಲ. ಶಿಬಿರದಲ್ಲಿ ದೃಷ್ಟಿ ಪರೀಕ್ಷೆ, ಕಣ್ಣಿನ ನರ ಪರೀಕ್ಷೆ, ಟೋಪೋಗ್ರಫಿ ಸ್ಕ್ಯಾನ್(ಶಸ್ತ್ರ ಚಿಕಿತ್ಸೆಗೆ ಮೊದಲು ಮಾಡುವ ಪರೀಕ್ಷೆ) ಮೊದಲಾದ ಸೌಲಭ್ಯಗಳನ್ನು ಶಿಬಿರದಲ್ಲಿ ಉಚಿತವಾಗಿ ಒದಗಿಸಲಾಗುವುದು. ಚಿಕಿತ್ಸೆಗೆ ಅರ್ಹವಾದ ರೋಗಿಗಳಿಗೆ ಲೇಸರ್ ಚಿಕಿತ್ಸೆಯನ್ನು 50 ಶೇ. ವರೆಗಿನ ರಿಯಾಯಿತಿ ದರದಲ್ಲಿ ನಡೆಸಲಾಗುವುದು.

ಹೆಚ್ಚಿನ ವಿವರಗಳಿಗೆ 8792882134, 9482863095 ಈ ನ0ಬರನ್ನು ಸ0ಪರ್ಕಿಸಬಹುದು ಎ0ದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!