ಮೋದಿ 3.0: ನೂತನ ಸಚಿವರಿಗೆ ಖಾತೆ ಹಂಚಿಕೆ: ಕುಮಾರ ಸ್ವಾಮಿಗೆ ಉಕ್ಕು/ಭಾರೀ ಕೈಗಾರಿಕೆ, ಜೋಶಿ ಇಂಧನ

Oplus_0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸರ್ಕಾರದ 71 ಸಚಿವರೊಂದಿಗೆ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದು, ಇವರಲ್ಲಿ ಮೂವತ್ತು ಮಂದಿ ಕ್ಯಾಬಿನೆಟ್ ಮಂತ್ರಿಗಳಾಗಿ, ಐವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಾಗಿ ಮತ್ತು 36 ಮಂದಿ ರಾಜ್ಯ ಸಚಿವರಾಗಿ ಸೇರ್ಪಡೆಗೊಂಡಿದ್ದರು.

ಇದೀಗ ನೂತನ ಸಚಿವರಿಗೆ ಪ್ರಧಾನಿ ಮೋದಿ ಖಾತೆ ಹಂಚಿಕೆ ಮಾಡಿದ್ದಾರೆ. ಅದರಂತೆ ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಸಚಿವರಾಗಿ ನಿತಿನ್ ಗಡ್ಕರಿ, ಗೃಹ ಸಚಿವರಾಗಿ ಅಮಿತ್ ಶಾ, ರಕ್ಷಣಾ ಸಚಿವರಾಗಿ ರಾಜನಾಥ್ ಸಿಂಗ್, ಹಾಗೂ ವಿದೇಶಾಂಗ ಸಚಿವರಾಗಿ ಎಸ್ ಜೈಶಂಕರ್ ಅವರಿಗೆ ಮತ್ತದೆ ಖಾತೆಗಳಲ್ಲಿ ಮುಂದುವರೆಯುತ್ತಿದ್ದಾರೆ. ಇನ್ನು ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ ರಾಜ್ಯ ಸಚಿವರಾಗಿ ಅಜಯ್ ತಮ್ತಾ ಮತ್ತು ಹರ್ಷ್ ಮಲ್ಹೋತ್ರಾಗೆ ಉಸ್ತುವಾರಿ ವಹಿಸಲಾಗಿದೆ.

ಕೃಷಿ – ಶಿವರಾಜ್ ಸಿಂಗ್ ಚೌಹಾಣ್

ವಿದ್ಯುತ್ ಮತ್ತು ನಗರ ವ್ಯವಹಾರಗಳ ಸಚಿವಾಲಯ – ಮನೋಹರ್ ಲಾಲ್ ಖಟ್ಟರ್

ವಾಣಿಜ್ಯ – ಪಿಯೂಷ್ ಗೋಯಲ್

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ – ಹರ್ದೀಪ್ ಸಿಂಗ್ ಪುರಿ

ರೈಲ್ವೆ ಮತ್ತು ಮಾಹಿತಿ ಮತ್ತು ಪ್ರಸಾರ — ಅಶ್ವಿನಿ ವೈಷ್ಣವ್

ಶಿಕ್ಷಣ – ಧರ್ಮೇಂದ್ರ ಪ್ರಧಾನ್

ಆರೋಗ್ಯ – ಜೆಪಿ ನಡ್ಡಾ

ಕಾರ್ಮಿಕ ಮತ್ತು ಕ್ರೀಡೆ – ಮನ್ಸುಖ್ ಮಾಂಡವಿಯಾ

ಪರಿಸರ – ಭೂಪೇಂದ್ರ ಯಾದವ್

ವಿಮಾನಯಾನ – ರಾಮ್ ಮೋಹನ್ ಯಾದವ್

ಸಂಸದೀಯ ವ್ಯವಹಾರಗಳು – ಕಿರಣ್ ರಿಜಿಜು

MSME – ಜಿತನ್ ರಾಮ್ ಮಾಂಝಿ

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ – ಪ್ರಲ್ಹಾದ್ ಜೋಶಿ

ಉಕ್ಕು, ಭಾರೀ ಕೈಗಾರಿಕೆ – ಹೆಚ್ ಡಿ ಕುಮಾರಸ್ವಾಮಿ

ಚಿರಾಗ್ ಪಾಸ್ವಾನ್ – ಆಹಾರ ಸಂಸ್ಕರಣಾ ಉದ್ಯಮ

Leave a Reply

Your email address will not be published. Required fields are marked *

error: Content is protected !!