ಬ್ರಹ್ಮಾವರ: ಗೇರು ಬೀಜ ಕಾರ್ಖಾನೆಯಲ್ಲಿ ಕಳ್ಳತನ ಇಬ್ಬರ ಬಂಧನ
ಬ್ರಹ್ಮಾವರ: ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಗೇರು ಬೀಜ ಕಾರ್ಖಾನೆಯಲ್ಲಿನ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ದಕ ಪುತ್ತೂರು ಮೊಟ್ಟೆತಡ್ಕ ಸೈಯದ್ ಮೊಹಮ್ಮದ್ (37),ಬಂಟ್ವಾಳ ಮಿತ್ತೂರು ಉಮರ್ ಫಾರೂಕ್ (36) ಬಂಧಿತರಿಂದ ಮಾರುತಿ ಸುಝುಕಿ ಸ್ವಿಫ್ಟ್ ಕಾರು, ಮತ್ತು ಕಾರ್ಖಾನೆಯಿಂದ ಕಳವಾದ 1.40 ಲಕ್ಷ ಮೌಲ್ಯದ 32 ಗೇರು ಬೀಜ ಡಬ್ಬ, ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಉಡುಪಿ, ಹೆಬ್ರಿ ಮತ್ತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಉಡುಪಿ, ಹೆಬ್ರಿ ಮತ್ತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ, ಸಿಬ್ಬಂದಿಗಳಾದ ಎಎಸ್ಐ ಶಾಂತರಾಜ್, ಎಎಸ್,ಐ ಗೋಪಾಲ ಪೂಜಾರಿ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ, ರಾಘವೇಂದ್ರ ಕಾರ್ಕಡ, ಸಂತೋಷ್ ಶೆಟ್ಟಿ, ಗಣೇಶ ದೇವಾಡಿಗ, ದಿಲೀಪ್ ಕುಮಾರ, ಚಾಲಕ ಅಣ್ಣಪ್ಪ ಸಹಕರಿಸಿರುತ್ತಾರೆ.