ಮೋದಿ ಹೊಸ ಸರಕಾರದಲ್ಲಿ ಎಷ್ಟು ಸಚಿವರು? ಯಾರ‍್ಯಾರು ಸಚಿವರು?

ಹೊಸದಿಲ್ಲಿ : ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ರವಿವಾರ ಸಂಜೆ ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಎನ್ಡಿಎ ಮೈತ್ರಿಕೂಟದ ಈ ಸರ್ಕಾರದಲ್ಲಿ ಪಾಲುದಾರ ಪಕ್ಷಗಳಲ್ಲಿ ಬಿಜೆಪಿ ನಂತರದ ಪ್ರಮುಖ ಪಕ್ಷಗಳಾಗಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಇವೆ.

ಬಹುಮತ ಪಡೆಯದ ಬಿಜೆಪಿ, ಸರ್ಕಾರ ರಚಿಸುವಲ್ಲಿ ಇವೆರಡೂ ಪಕ್ಷಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇದರೊಂದಿಗೆ ಶಿವಸೇನೆಯ ಶಿಂಧೆ ಬಣ ಹಾಗೂ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಕೂಡ ಈ ಬಾರಿ ಮೋದಿ ಸರ್ಕಾರ ನಿಲ್ಲುವಲ್ಲಿ ನಿರ್ಣಾಯಕವಾಗಿವೆ.

ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಈಶ್ವರನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಮೋದಿ ಮತ್ತು ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಇತರ ಸಂಸದರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು.

ಪ್ರಧಾನಿ ಮೋದಿಯೊಂದಿಗೆ 71 ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರಲ್ಲಿ 30 ಸಂಪುಟ ದರ್ಜೆ ಸಚಿವರಾಗಿದ್ಧಾರೆ. 5 ಮಂದಿ ರಾಜ್ಯ ದರ್ಜೆಯ ಸ್ವತಂತ್ರ ಖಾತೆ ಸಚಿವರು. 36 ಮಂದಿ ರಾಜ್ಯ ದರ್ಜೆ ಸಚಿವರು.

ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಆಯ್ಕೆಯಾದ ನಾಲ್ವರು ಸಂಸದರು ಸ್ಥಾನ ಪಡೆದಿದ್ಧಾರೆ.

ಕುಮಾರಸ್ವಾಮಿ – ಜೆಡಿಎಸ್ – ಮಂಡ್ಯ ಕ್ಷೇತ್ರ – ಕ್ಯಾಬಿನೆಟ್ ದರ್ಜೆ

ಪ್ರಹ್ಲಾದ್ ಜೋಶಿ – ಬಿಜೆಪಿ – ಹುಬ್ಬಳ್ಳಿ ಧಾರವಾಡ ಕ್ಷೇತ್ರ – ಕ್ಯಾಬಿನೆಟ್ ದರ್ಜೆ

ಶೋಭಾ ಕರಂದ್ಲಾಜೆ – ಬಿಜೆಪಿ – ಬೆಂಗಳೂರು ಉತ್ತರ ಕ್ಷೇತ್ರ – ರಾಜ್ಯ ಸಚಿವೆ

ವಿ ಸೋಮಣ್ಣ – ಬಿಜೆಪಿ – ತುಮಕೂರು ಕ್ಷೇತ್ರ – ರಾಜ್ಯ ಖಾತೆ

ಇವರಲ್ಲಿ ಕುಮಾರಸ್ವಾಮಿ ಮತ್ತು ಶೋಭಾ ಒಕ್ಕಲಿಗ ಸಮುದಾಯಕ್ಕೆ ಸೇರಿವದರು. ಜೋಶಿ ಬ್ರಾಹ್ಮಣ ಸಮುದಾಯದವರಾದರೆ, ಸೋಮಣ್ಣ ಲಿಂಗಾಯತ ಸಮುದಾಯದವರಾಗಿದ್ದಾರೆ.

ಅಲ್ಲದೆ, ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್ ಕೂಡ ಮತ್ತೆ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಬ್ರಾಹ್ಮಣ ಸಮುದಾಯದವರು.

ಮೋದಿ ಸಂಪುಟದಲ್ಲಿ ಸ್ಥಾನ ಪಡೆದವರ ವಿವರ:

ಕ್ಯಾಬಿನೆಟ್ ಮಂತ್ರಿಗಳು:

ರಾಜನಾಥ್ ಸಿಂಗ್ – ಬಿಜೆಪಿ – ಉತ್ತರ ಪ್ರದೇಶದ ಲಕ್ನೋ

ಅಮಿತ್ ಶಾ – ಅಮಿತ್ ಶಾ – ಬಿಜೆಪಿ – ಗುಜರಾತ್ ನ ಗಾಂಧಿನಗರ ಕ್ಷೇತ್ರ

ನಿತಿನ್ ಗಡ್ಕರಿ – ಬಿಜೆಪಿ – ಮಹಾರಾಷ್ಟ್ರ ನಾಗ್ಪುರ ಕ್ಷೇತ್ರ

ಜೆಪಿ ನಡ್ಡಾ – ಬಿಜೆಪಿ – ರಾಜ್ಯಸಭಾ ಸದಸ್ಯ

ಶಿವರಾಜ್ ಸಿಂಗ್ ಚೌಹಾಣ್ – ಬಿಜೆಪಿ – ಮಧ್ಯಪ್ರದೇಶದ ವಿದಿಶಾ ಕ್ಷೇತ್ರ

ನಿರ್ಮಲಾ ಸೀತಾರಾಮನ್ – ಬಿಜೆಪಿ – ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆ

ಎಸ್ ಜೈಶಂಕರ್ – ಬಿಜೆಪಿ – ರಾಜ್ಯಸಭಾ ಸದಸ್ಯ

ಮನೋಹರ್ ಲಾಲ್ ಖಟ್ಟರ್ – ಬಿಜೆಪಿ – ಹರಿಯಾಣದ ಕರ್ನಲ್ ಕ್ಷೇತ್ರ

ಎಚ್ ಡಿ ಕುಮಾರಸ್ವಾಮಿ – ಜೆಡಿಎಸ್ – ಮಂಡ್ಯ ಕ್ಷೇತ್ರ

ಪಿಯೂಶ್ ಗೋಯಲ್ – ಬಿಜೆಪಿ – ಮುಂಬೈ ಉತ್ತರ ಕ್ಷೇತ್ರ

ಧರ್ಮೇಂದ್ರ ಪ್ರಧಾನ್ – ಬಿಜೆಪಿ – ಒಡಿಶಾದ ಸಂಬಲ್ಪುರ

ಜಿತನ್ ರಾಮ್ ಮಾಂಝಿ – ಹಿಂದೂಸ್ತಾನಿ ಅವಾಮ್ ಮೋರ್ಚಾ – ಬಿಹಾರದ ಗಯಾ ಕ್ಷೇತ್ರ

ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲ್ಲನ್ ಸಿಂಗ್ – ಜೆಡಿಯು – ಬಿಹಾರದ ಮುಂಗರ್ ಕ್ಷೇತ್ರ

ಸರ್ಬಾನಂದ ಸೋನೋವಾಲ್ – ಬಿಜೆಪಿ – ಅಸ್ಸಾಂನ ದಿಬ್ರುಘಡ್ ಕ್ಷೇತ್ರ

ಡಾ. ವೀರೇಂದ್ರ ಕುಮಾರ್ –ಬಿಜೆಪಿ – ಮಧ್ಯ ಪ್ರದೇಶದ ತಿಕಂಗಢ ಕ್ಷೇತ್ರ

ಕಿಂಜರಪು ರಾಮಮೋಹನ್ ನಾಯ್ಡು – ಟಿಡಿಪಿ – ಆಂಧ್ರ ಪ್ರದೇಶದ ಶ್ರಿಕಾಕುಲಮ್ ಕ್ಷೇತ್ರ

ಪ್ರಹ್ಲಾದ್ ಜೋಶಿ – ಬಿಜೆಪಿ – ಹುಬ್ಬಳ್ಳಿ ಧಾರವಾಡ ಕ್ಷೇತ್ರ

ಜುಅಲ್ ಒರಾಮ್ – ಬಿಜೆಪಿ – ಓದಿಶಾದ ಸುಂದರ್ಗರ್ಹ್

ಗಿರಿರಾಜ್ ಸಿಂಗ್ – ಬಿಜೆಪಿ – ಬಿಹಾರದ ಬೇಗುಸರೈ ಕ್ಷೇತ್ರ

ಅಶ್ವಿನಿ ವೈಷ್ಣವ್ – ಬಿಜೆಪಿ – ಒಡಿಶಾ ದಿಂದ ರಾಜ್ಯಸಭಾ ಸದಸ್ಯ

ಜ್ಯೋತಿರಾದಿತ್ಯ ಸಿಂಧಿಯಾ – ಬಿಜೆಪಿ – ಮಧ್ಯಪ್ರದೇಶದ ಗುಣಾ ಕ್ಷೇತ್ರ

ಭೂಪೇಂದ್ರ ಯಾದವ್ – ಬಿಜೆಪಿ – ರಾಜಸ್ಥಾನದದ ಅಲ್ವಾರಾ ಕ್ಷೇತ್ರ

ಗಜೇಂದ್ರ ಸಿಂಗ್ ಶೆಖಾವತ್ – ಬಿಜೆಪಿ – ರಾಜಸ್ಥಾನದ ಜೋಧ್ಪುರ

ಅನ್ನಪೂರ್ಣಾ ದೇವಿ – – ಜಾರ್ಖಂಡ್ನ ಕೊಡರ್ಮಾ ಕ್ಷೇತ್ರ

ಕಿರಣ್ ರಿಜಿಜು – ಬಿಜೆಪಿ – ಅರಣಾಚಲ ಪಶ್ಚಿಮ ಕ್ಷೇತ್ರ

ಹರ್ದೀಪ್ ಸಿಂಗ್ ಪುರಿ – ಬಿಜೆಪಿ – ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯ

ಮನ್ಸುಖ್ ಮಾಂಡವಿಯ – ಬಿಜೆಪಿ– ಗುಜರಾತ್ ನ ಪೋರ್ಬಂದರ್ ಕ್ಷೇತ್ರ

ಜಿ ಕಿಶನ್ ರೆಡ್ಡಿ – ಬಿಜೆಪಿ – ಸಿಕಂದರಾಬಾದ್

ಚಿರಾಗ್ ಪಾಸ್ವಾನ್ – ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) – ಬಿಹಾರದ ಹಾಜಿಪುರ ಕ್ಷೇತ್ರ

ಸಿ ಆರ್ ಪಾಟೀಲ್ – ಬಿಜೆಪಿ – ಗುಜರಾತ್ ನ ನವ್ಸರಿ

ಸ್ವತಂತ್ರ ಖಾತೆ ರಾಜ್ಯ ಸಚಿವರು

ರಾವ್ ಇಂದ್ರಜಿತ್ ಸಿಂಗ್ – ಬಿಜೆಪಿ – ಹರಿಯಾಣದ ಗುರ್ಗಾಂವ್

ಜಿತೇಂದ್ರ ಸಿಂಗ್ – ಬಿಜೆಪಿ – ಜಮ್ಮು ಕಾಶ್ಮೀರದ ಉಧಂಪುರ್ ಕ್ಷೇತ್ರ

ಅರ್ಜುನ್ ರಾಮ್ ಮೇಘವಾಲ್ – ಬಿಜೆಪಿ – ರಾಜಸ್ಥಾನದ ಬಿಕಾನೇರ್

ಪ್ರತಾಪ್ ರಾವ್ ಗಣಪತರಾವ್ ಜಾಧವ್ – ಶಿವಸೇನಾ – ಮಹಾರಾಷ್ಟ್ರದ ಬುಲ್ದಾನಾ

ಜಯಂತ್ ಚೌಧರಿ – ಆರ್ ಎಲ್ ಡಿ– –ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯ

ರಾಜ್ಯ ಖಾತೆ ಸಚಿವರು

ಜಿತಿನ್ ಪ್ರಸಾದ್ – ಬಿಜೆಪಿ – ಉತ್ತರ ಪ್ರದೇಶದ ಫಿಲಿಭೀತ್

ಶ್ರೀಪಾದ್ ನಾಯ್ಕ – ಬಿಜೆಪಿ – ಉತ್ತರ ಗೋವಾ

ಕ್ರಿಶನ್ ಪಾಲ್ ಗುರ್ಜರ್ – ಬಿಜೆಪಿ – ಹರಿಯಾಣದ ಫರಿದಾಬಾದ್

ಪಂಕಜ್ ಚೌಧರಿ – ಬಿಜೆಪಿ – ಉತ್ತರ ಪ್ರದೇಶದ ಮಹರಾಜ್ಗಂಜ್

ರಾಮದಾಸ್ ಅಠವಳೆ – ಆರ್ ಪಿ ಐ – ಮಹಾರಾಷ್ಟ್ರದಿಂದ ರಾಜ್ಯಸಭಾ ಸದಸ್ಯ

ರಾಮನಾಥ್ ಠಾಕೂರ್ – ಜೆಡಿಯು – ಬಿಹಾರದಿಂದ ರಾಜ್ಯಸಭಾ ಸದಸ್ಯ

ನಿತ್ಯಾನಂದ ರಾಯ್–ಬಿಜೆಪಿ –ಬಿಹಾರದ ಉಜೈರ್ಪುರ್

ಅನುಪ್ರಿಯಾ ಪಟೇಲ್ – ಅಪ್ನಾ ದಳ್ – ಉತ್ತರ ಪ್ರದೇಶದ ಮಿರ್ಜಾಪುರ

ವಿ ಸೋಮಣ್ಣ – ಬಿಜೆಪಿ – ಕರ್ನಾಟಕದ ತುಮಕೂರು ಕ್ಷೇತ್ರ

ಡಾ.ಚಂದ್ರಶೇಖರ್ ಪೆಮ್ಮಸಾನಿ – ಟಿಡಿಪಿ – ಆಂಧ್ರಪ್ರದೇಶದ ಗುಂಟೂರ್

ಎಸ್ಪಿ ಸಿಂಗ್ ಬಘೇಲ್ – ಬಿಜೆಪಿ – ಉತ್ತರ ಪ್ರದೇಶದ ಆಗ್ರಾ

ಶೋಭಾ ಕರಂದ್ಲಾಜೆ – ಬಿಜೆಪಿ – ಬೆಂಗಳೂರು ಉತ್ತರ

ಕೀರ್ತಿವರ್ಧನ್ ಸಿಂಗ್– ಬಿಜೆಪಿ– ಉತ್ತರ ಪ್ರದೇಶದ ಗೊಂಡ

ಬಿಎಲ್ ವರ್ಮಾ – ಬಿಜೆಪಿ – ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯ

ಶಾಂತನು ಠಾಕೂರ್ –ಬಿಜೆಪಿ – ಪಶ್ಚಿಮ ಬಂಗಾಳದ ಬಂಗಾಂವ್

ಸುರೇಶ್ ಗೋಪಿ – ಬಿಜೆಪಿ – ಕೇರಳದ ತ್ರಿಶೂರ್ ಕ್ಷೇತ್ರ

ಎಲ್ ಮುರುಗನ್ – ಬಿಜೆಪಿ – ತಮಿಳುನಾಡು

ಅಜಯ್ ತಾಮ್ತ – ಬಿಜೆಪಿ – ಉತ್ತರಾಖಂಡದ ಅಲ್ಮೋರಾ ಕ್ಷೇತ್ರ

ಬಂಡಿ ಸಂಜಯ್ ಕುಮಾರ್ – ಬಿಜೆಪಿ – ತೆಲಂಗಾಣದ ಕರೀಂ ನಗರ

ಕಮಲೇಶ್ ಪಾಸ್ವಾನ್ – ಬಿಜೆಪಿ – ಉತ್ತರ ಪ್ರದೇಶದ ಬನ್ಸ್ಗಾಂವ್

ಭಗೀರತ್ ಚೌಧರಿ – ಬಿಜೆಪಿ – ರಾಜಸ್ಥಾನದ ಅಜ್ಮೇರ್

ಸತೀಶ್ಚಂದ್ರ ದುಬೆ – ಬಿಜೆಪಿ – ಬಿಹಾರದಿಂದ ರಾಜ್ಯಸಭಾ ಸದಸ್ಯ

ಸಂಜಯ್ ಸೇಠ್ – ಬಿಜೆಪಿ – ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯ

ರವನೀತ್ ಸಿಂಗ್ ಬಿಟ್ಟು – ಬಿಜೆಪಿ – ಪಂಜಾಬ್

ದುರ್ಗಾದಾಸ್ ಉಕೆ – ಬಿಜೆಪಿ – ಮಧ್ಯಪ್ರದೇಶದ ಬೆಟುಲ್

ರಕ್ಷಾ ನಿಖಿಲ್ ಖಡ್ಸೆ – ಬಿಜೆಪಿ – ಮಹಾರಾಷ್ಟ್ರದ ರಾವೇರ್

ಸುಕಂತ ಮಜುಮ್ದಾರ್ – ಬಿಜೆಪಿ – ಪಶ್ಚಿಮ ಬಂಗಾಳದ ಬಲೂರ್ಘಾಟ್

ಸಾವಿತ್ರಿ ಠಾಕೂರ್ – ಬಿಜೆಪಿ – ಮಧ್ಯಪ್ರದೇಶದ ಧರ್

ತೋಕನ್ ಸಾಹು –ಬಿಜೆಪಿ – ಛತ್ತೀಸ್ಘಡದ ಬಿಲಾಸ್ಪುರ

ರಾಜ್ ಭೂಷಣ್ ಚೌಧರಿ – ಬಿಜೆಪಿ – ಬಿಹಾರದ ಮುಝಫ್ಫರ್ಪುರ್

ಭೂಪತಿ ರಾಜು ಶ್ರೀನಿವಾಸ್ ವರ್ಮಾ – ಬಿಜೆಪಿ – ಆಂದ್ರಪ್ರದೇಶದ ನರಸಪುರಂ

ಹರ್ಷ್ ಮಲ್ಹೋತ್ರಾ – ಬಿಜೆಪಿ – ಪೂರ್ವ ದೆಹಲಿ

ನೀಮುಬೆನ್ ಜಯಂತಿಭಾಯಿ ಬಂಭಾನಿಯ – ಬಿಜೆಪಿ – ಗುಜರಾತಿನ ಭಾವನಗರ್

ಮುರಳೀಧರ್ ಮೊಹೊಲ್–ಬಿಜೆಪಿ – ಪುಣೆ

ಜಾರ್ಜ್ ಕುರಿಯನ್ – ಬಿಜೆಪಿ – ಕೇರಳ

ಪಬಿತ್ರ ಮರ್ಗೇರಿಟ – ಬಿಜೆಪಿ – ಅಸಾಮಿನಿಂದ ರಾಜ್ಯಸಭಾ ಸದಸ್ಯ

Leave a Reply

Your email address will not be published. Required fields are marked *

error: Content is protected !!